ವಿಧಾನಸಭಾ ಕಲಾಪಕ್ಕೆ ಬಹುತೇಕ ಸಚಿವರು ಗೈರು:  ವಿಪಕ್ಷ ನಾಯಕ ಸಿದ್ಧರಾಮಯ್ಯ ಗರಂ…

ಬೆಂಗಳೂರು,ಫೆ,19,2020(www.justkannada.in):  ಇಂದು ವಿಧಾನಸಭೆ ಕಲಾಪ ಆರಂಭದಲ್ಲಿ ಹಲವು ಸಚಿವರು ಗೈರಾಗಿದ್ದ ಹಿನ್ನೆಲೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪಕ್ಕೆ ಹಲವು ಸಚಿವರು ಗೈರಾಗಿದ್ದು.  ಸಚಿವ ಕೆ.ಎಸ್ ಈಶ್ವರಪ್ಪ. ಡಾ.ಸುಧಾಕರ್  ಮಾತ್ರ ಉಪಸ್ಥಿತರಿದ್ದರು. ಈಶ್ವರಪ್ಪ, ಡಾ. ಸುಧಾಕರ್ ಹೊರತುಪಡಿಸಿ ಉಳಿದವರು ಗೈರಾದ ಹಿನ್ನೆಲೆ ಗರಂ ಆದ ಸಿದ್ದರಾಮಯ್ಯ, ಸಚಿವರು ಗೈರಾಗುವ ರೋಗ ಎಲ್ಲಾ ಕಾಲದಲ್ಲೂ ಇದೆ. ಈ ಸರ್ಕಾರದಲ್ಲೂ  ಅದೇ ರೋಗ ಇದೆ. ಸಚಿವರೇ ಇಲ್ಲದಿದ್ದರೇ ಯಾರ ಮುಂದೆ ಮಾತನಾಡಲಿ ಎಂದು ಕೆ.ಎಸ್ ಈಶ್ವರಪ್ಪರನ್ನ ಏರುಧ್ವನಿಯಲ್ಲಿ ಸಿದ್ದರಾಮಯ್ಯ ಕೇಳಿದರು.

ಈ ವೇಳೆ ಸಚಿವ .ಕೆ.ಎಸ್ ಈಶ್ವರಪ್ಪ ಸಿದ್ಧರಾಮಯ್ಯರನ್ನ ಸಮಾಧಾನಪಡಿಸಲು ಯತ್ನಿಸಿದರು. ಸಚಿವರು ಕಚೇರಿ ಪೂಜೆಗೆ ತೆರಳಿದ್ದು ಕಲಾಪಕ್ಕೆ ಬರುತ್ತಾರೆ ಎಂದು ಹೇಳಿದರು. ಸಚಿವರ ಗೈರು ಸಂಬಂಧ ಮಾತನಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಯಾವ ಸಚಿವರು ಇರಬೇಕೆಂದು ಪಟ್ಟಿ ಮಾಡಿ ಸೂಚನೆ ನೀಡಲಾಗಿದೆ. ಹೀಗಾಗಿ ಕಲಾಪದಲ್ಲಿ ಸರಿಯಾದ ಸಮಯಕ್ಕೆ ಹಾಜರಾಗಬೇಕು. ಇದನ್ನ ಸಚಿವರೇ ಅರಿತುಕೊಳ್ಳಬೇಕು.  ಶಿಸ್ತು ಪಾಲನೆ ಅಗತ್ಯ ಎಂದರು.

Key words: ministers -absent –session- assembly-siddaramaiah