ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ ಎಂದ ಬಿಜೆಪಿ ಶಾಸಕ..

Promotion

ಕೊಡಗು,ಜು,31,2020(www.justkannada.in): ವಿಧಾನ ಪರಿಷತ್ ಗೆ ಹೆಚ್.ವಿಶ್ವನಾಥ್ , ಸಿಪಿ ಯೋಗೇಶ್ವರ್ ಸೇರಿ ಐದು ಮಂದಿಯನ್ನ ನಾಮನಿರ್ದೇಶನ ಮಾಡಿದ ಬಳಿಕ ರಾಜ್ಯದಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮುನ್ನಲೆಗೆ ಬಂದಿದೆ.jk-logo-justkannada-logo

ಆಗಸ್ಟ್ ತಿಂಗಳಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದ್ದು ಇದೀಗ ಸಚಿವಾಕಾಂಕ್ಷಿಗಳು ಲಾಬಿ ಮಾಡಲು ಪ್ರಾರಂಭಿಸಿದ್ದಾರೆ. ಅಂತೆಯೇ ಶಾಸಕ ಅಪ್ಪಚ್ಚು ರಂಜನ್ ಸಹ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.ministerial-candidate-bjp-mla-kodagu

ಈ ಕುರಿತು ಇಂದು ಮಾತನಾಡಿರುವ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್,  ನಾನು 5 ಬಾರಿ ಶಾಸಕನಾಗಿದ್ದೇನೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪಕ್ಷದ ಹಿರಿಯ ಶಾಸಕರ ಸ್ಥಾನದಲ್ಲಿ ನಾನೂ ಇದ್ದೇನೆ. ನನಗೂ ಅವಕಾಶ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Key words: ministerial –candidate- BJP MLA-kodagu