ಡಿಕೆಶಿ, ಸಿದ್ಧರಾಮಯ್ಯ ಮತ್ತು ತಮ್ಮದೇ ಪಕ್ಷದ ಶಾಸಕ ರಮೇಶ್ ಜಾರಕಿಹೊಳಿಗೂ ಟಾಂಗ್ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್.

Promotion

ಮೈಸೂರು,ಜನವರಿ,26,2022(www.justkannada.in):   ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಟಿ ಸೋಮಶೇಖರ್ ಟಾಂಗ್ ನೀಡಿದ್ದಾರೆ.

ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತಿನಿ ಬಿಡ್ತಿನಿ ಅಂತಾರೆ. ಹಾವಿನ ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು. ಬೂಸ್ ಅನ್ನತಾ ಅಥವಾ ಟುಸ್ ಅನ್ನುತ್ತಾ ಅಂತಾ. ಇತ್ತೀಚೆಗೆ ಇದು ಎಲ್ಲರಿಗೂ ಚಟ ಆಗಿದೆ. ರಮೇಶ್ ಜಾರಕಿಹೋಳಿ ಸಹ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳಿದ್ದಾರೆ. ಇದು ಎಲ್ಲಿರಿಗೂ ಒಂದು ತರಹದ ಹ್ಯಾಬಿಟ್ ಆಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಹಾಗೂ ತಮ್ಮದೇ ಪಕ್ಷ ರಮೇಶ್ ಜಾರಕಿಹೋಳಿಗೂ ಸಚಿವ ಎಸ್.ಟಿ ಸೋಮಶೇಖರ್ ಟಾಂಗ್ ನೀಡಿದರು.

ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೆ ಅವರು ಏನೇನೋ ಮಾತಾಡುತ್ತಾರೆ. ಆದರೆ ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿಎಂ ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಕೆಲಸ ಇಲ್ಲದ ಕಾಂಗ್ರೆಸ್ ಸುಮ್ಮನೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು 72ನೇ ಗಣರಾಜ್ಯೋತ್ಸವ ಹಿನ್ನೆಲೆ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಧ್ವಜಾರೋಹಣ ನೆರವೇರಿಸಿದರು.

Key words: Minister – ST Somashekhar-Siddaramaiah-DK Shivakumar