ಮಾಜಿ ಸಿಎಂ ಸಿದ್ಧರಾಮಯ್ಯ ಕ್ಷಮೆ ಕೋರುವಂತೆ ಆಗ್ರಹಿಸಿದ ಸಚಿವ ಶ್ರೀರಾಮುಲು.

treat-rate-health-minister-sriramulu-warning-private-hospitals
Promotion

ಬಳ್ಳಾರಿ,ಜನವರಿ,4,2023(www.justkannada.in):  ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ನಾಯಿ ಮರಿಯಂತೆ ಇರ್ತಾರೆ ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಕ್ಷಮೆಯಾಚಿಸುವಂತೆ ಸಾರಿಗೆ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯನವರು ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಮಾತಾಡಿ ತಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದಾರೆ. ಸೋನಿಯಾ ಗಾಂಧಿ ಎದುರು ನೀವು ಬೆಕ್ಕು, ಇಲಿ, ನಾಯಿ, ಜಿರಲೆ ಥರ ಇರುತ್ತೀರಿ ಅಂತ ನಾವು ಹೇಳಬಹುದು, ಅದರೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.treat-rate-health-minister-sriramulu-warning-private-hospitals

ತಮ್ಮ ಅವಹೇಳನಕಾರಿ ಪದಬಳಕೆಗೆ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ  ಸಿಎಂ ಬೊಮ್ಮಾಯಿ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Key words: Minister- Sriramulu -demanded – apology – former CM- Siddaramaiah.