ನೇಕಾರರೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಆಲಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ.

ಬೆಳಗಾವಿ,ಸೆಪ್ಟಂಬರ್,29,2021(www.justkannada.in): ಕೈಮಗ್ಗ & ಜವಳಿ ಹಾಗೂ ಸಕ್ಕರೆ ಸಚಿವ  ಶಂಕರ ಪಾಟೀಲ ಬ ಮುನೇನಕೊಪ್ಪ ಬೆಳಗಾವಿ ವಿಭಾಗ ಮಟ್ಟದ ಕೈಮಗ್ಗ, ಜವಳಿದಾರರು & ನೇಕಾರರೊಂದಿಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಂವಾದವನ್ನು ನಡೆಸಿ, ಕೈಮಗ್ಗ & ಜವಳಿ ಇಲಾಖೆಯ ಸಮಸ್ಯೆಗಳನ್ನು ನೇಕಾರರಿಂದ ಅಲಿಸಿದರು.

ಕೇಂದ್ರ ಸರ್ಕಾರ & ರಾಜ್ಯ ಸರ್ಕಾರ ಕೈಮಗ್ಗ & ಜವಳಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆಯನ್ನು ವಿವರಿಸಿದರು ಹಾಗೂ ಸಂವಾದದಲ್ಲಿ ನೇಕಾರರು ತಿಳಿಸಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ, ಮತ್ತೊಂದು ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

ಈ ಸಮಯದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಸಿದ್ದು ಸವದಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ನೀಲಕಂಠ ಮಾಸ್ತಮರಡಿ, ಶಾಸಕರಾದ ಮಹಾದೇವಪ್ಪ ಯದವಾಡ್, ಸಂಸದೆ ಶ್ರೀಮತಿ ಮಂಗಳ ಅಂಗಡಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister- Sankara Patil Muneenakoppa – issues – handloom- weavers-problem