ನೆರೆಪರಿಹಾರ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ರೆ ಮುಲಾಜಿಲ್ಲದೆ ಸಸ್ಪಂಡ್- ಅಧಿಕಾರಿಗಳಿಗೆ ಸಚಿವ ಆರ್.ಅಶೋಕ್ ಎಚ್ಚರಿಕೆ…

ಕಲ್ಬುರ್ಗಿ,ಅಕ್ಟೋಬರ್,16,2020(www.justkannada.in):  ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಅಪಾಯ ಮಟ್ಟ ಮೀರಿ ನದಿಗಳು ಹರಿಯುತ್ತಿರುವ ಹಿನ್ನೆಲೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಈ ಹಿನ್ನೆಲೆ ಇಂದು ಕಂದಾಯ ಸಚಿವ ಆರ್.ಅಶೋಕ್ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.jk-logo-justkannada-logo

ಕಲ್ಬರ್ಗಿ ಜಿಲ್ಲೆಯ ಸಾರಡಗಿ-ಕೋನಹಿಪ್ಪರಗಿ ಸೇತುವೆ ವೀಕ್ಷಿಸಿದ ಸಚಿವ ಆರ್,ಅಶೋಕ್ ಬಳಿಕ ಉಕ್ಕಿ ಹರಿಯುತ್ತಿರುವ ಭೀಮನದಿಯನ್ನ ವೀಕ್ಷಣೆ ಮಾಡಿದರು. ನಂತರ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. ಈ ವೇಳೆ ಸಚಿವ ಆರ್,ಅಶೋಕ್ ಬಳಿ ನೆರೆ ಸಂತ್ರಸ್ತರು ನಮ್ಮ ನೆರವಿಗೆ ಯಾವ ಅಧಿಕಾರಿಗಳು ಬಂದಿಲ್ಲ ಎಂಬುದಾಗಿ ಅಳಲು ತೋಡಿಕೊಂಡರು.

ಈ ವೇಳೆ ಅಧಿಕಾರಿಗಳನ್ನ ವಿರುದ್ಧ ಗರಂ ಆದ ಸಚಿವ ಆರ್.ಅಶೋಕ್, ನೆರೆ, ಪ್ರವಾಹ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.Minister-R. Ashok- warns –officer- negligence-flood

ಅಲ್ಲದೆ ನೆರೆ ಪರಿಹಾರ ಕಾರ್ಯದಲ್ಲಿ ನಿರ್ಲಕ್ಷ್ವ ವಹಿಸಿದರೇ ಅಂತವರನ್ನು ಮುಲಾಜಿಲ್ಲದೇ ಅಮಾನತು ಮಾಡುವುದಾಗಿ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು. ಇನ್ನು ಇದೀಗ ಸಚಿವ ಆರ್.ಅಶೋಕ್ ಯಾದಗಿರಿಯ ಶಹಪುರ ತಾಲ್ಲೂಕಿನ ರೋಜಾಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಪ್ರವಾಹದಿಂದ ರೋಜಾಗ್ರಾಮ ನಡುಗಡ್ಡೆಯಂತಾಗಿದ್ದು ಎನ್ ಡಿಆರ್ ಎಫ್ ತಂಡದ ಜತೆ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದಾರೆ.

Key words: Minister-R. Ashok- warns –officer- negligence-flood