ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನ ಮೊದಲು ಬಿಡಿ-ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ಕಿಡಿ.

kpcc-president-dk-shivakumar-function-minister-r-ashok
Promotion

ಬೆಂಗಳೂರು,ಡಿಸೆಂಬರ್,15,2022(www.justkannada.in):  ವೋಟರ್ ಐಡಿ ಹಗರಣ ಹೊರಬರುತ್ತಿದ್ದಂತೆ ಕುಕ್ಕರ್ ಬ್ಲಾಸ್ಟ್ ಷಡ್ಯಂತ್ರ ನಡೆಯಿತು ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೊಕ್ ಕಿಡಿಕಾರಿದರು.

ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ಉಗ್ರರಿಗೆ ಕನಿಕರ ತೋರಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದ. ತಮ್ಮ ಹೇಳಿಕೆಯನ್ನ ಡಿಕೆ ಶಿವಕುಮಾರ್ ಹಿಂಪಡೆಯಬೇಕು. ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.kpcc-president-dk-shivakumar-function-minister-r-ashok

ಕಾಂಗ್ರೆಸ್ ನವರು ಉಗ್ರರನ್ನ  ದೇವಲೋಕದವರಂತೆ ನೋಡುತ್ತಾರೆ. ಮುಸ್ಲೀಂ ಟಾರ್ಗೆಟ್ ಆದಾಗ ಕಾಂಗ್ರೆಸ್ ಗೆ ಎಲ್ಲಿಲ್ಲದ ಉರಿ. ಕಸಬ್ ಗೆ ಬಿರ್ಯಾನಿ ತಿನ್ನಿಸಿ ಸಾಕಿಕೊಂಡಿದ್ದರು.  ಭಯೋತ್ಪಾದನೆಗೆ ಕುಮ್ಮಕ್ಕು ನೀಡುವೋದನ್ನ ಮೊದಲು ಬಿಡಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: Minister- R. Ashok -accused -Congress – terrorism.