ಮಂತ್ರಿಯಾಗಿ ಬೆಳೆಯುತ್ತಾನೆಂದು ಕೆಲವರಿಗೆ ಹೊಟ್ಟೆ ಕಿಚ್ಚು: ನನ್ನ ವಿರುದ್ಧ ಷಡ್ಯಂತ್ರ- ಶಾಸಕ ವಿಜಯಾನಂದ ಕಾಶಪ್ಪನವರ್ ಬೇಸರ.

Promotion

ಬಾಗಲಕೋಟೆ, ಮೇ,27,2023(www.justkannada.in):  ತಮಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ ಶಾಸಕ ವಿಜಯಾನಂದ ಕಾಶಪ್ಪನವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಿಜಯಾನಂದ ಕಾಶಪ್ಪನವರ್,  ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಚಿವ ಸ್ಥಾನ ಕೊಡುವ ನಿರೀಕ್ಷೆ ಇತ್ತು. ಸಚಿವ ಸ್ಥಾನ ಕೊಡದಿದ್ದಕ್ಕೆ ಕ್ಷೇತ್ರದ ಜನ ಆಕ್ರೋಶ ಹೊರಹಾಕ್ತಿದ್ದಾರೆ. ಕ್ಷೇತ್ರದ ಜನರನ್ನು ಸಮಾಧಾನ ಮಾಡುತ್ತಿದ್ದೇನೆ . ಮಂತ್ರಿಯಾದ್ರೆ ಎಲ್ಲಿ ಬೆಳೆಯುತ್ತಾನೆ ಎಂದು ಕೆಲವರಿಗೆ ಹೊಟ್ಟೆ ಕಿಚ್ಚು. ನನ್ನ ವಿರುದ್ಧ ಷಡ್ಯಂತ್ರ ನಡೆದಿರಬಹುದು.​​ ನಮ್ಮ ನಾಯಕರು ಹಿತ್ತಾಳೆ ಕಿವಿ ಹಾಕಿಕೊಂಡು ಕುಳಿತಿರುತ್ತಾರೆ. ನಿಜವಾದ ಶಕ್ತಿ ಯಾರ ಬಳಿ ಎಂದು ತಿಳಿದಿರುತ್ತಾರೆ ಎಂದು ಹೇಳಿದರು.

ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ತಂದಿದ್ದಾರೆ, ಅವರ ವಿಶ್ವಾಸ ಉಳಿಸಿಕೊಂಡು ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ಸರ್ಕಾರ ನಡೆಸಬೇಕಿದೆ, ಈಗ ಸಚಿವ ಸ್ಥಾನ ಸಿಗದಿದ್ದರೂ ಮುಂದೆ ಸಿಗಬಹುದು ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

Key words: minister-post-congress- MLA -Vijayananda Kashappanavar