ಪ್ರಮಾಣ ವಚನ ಸ್ವೀಕರಿಸುವ ವೇಳೆ ಜೆ.ಸಿ ಮಾಧುಸ್ವಾಮಿ ಅವರಿಂದ ಯಡವಟ್ಟು…

Promotion

ಬೆಂಗಳೂರು,ಆ,20,2019(www.justkannada.in): ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ 17 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಸಿಎಂ ಬಿಎಸ್ ವೈ ಸಂಪುಟ ಸೇರಿದ್ದಾರೆ. ಈ ಮಧ್ಯೆ ಪ್ರಮಾಣ ವಚನ ಸ್ವೀಕರಿಸುವ ವೇಳೆ ಜೆ.ಸಿ ಮಾಧುಸ್ವಾಮಿ ಅವರು ಒಂದು ಯಡವಟ್ಟು ಮಾಡಿಕೊಂಡರು.

ಇಂದು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನೆರವೇರಿತು. 17 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸುವ ವೇಳೆ ಶಾಸಕ ಜೆ.ಸಿ ಮಾಧು ಸ್ವಾಮಿ ಅವರು, ನಾನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಯಟವಟ್ಟು ಮಾಡಿಕೊಂಡರು. ನಂತರ ಅದನ್ನ ತಿದ್ದುಕೊಂಡು ಸಚಿವನಾಗಿ ಪ್ರಮಾಣ ವಚನ ಎಂದು ಹೇಳಿದರು.

Key words: minister-JC Madhuswamy -sworn oath- Awkwardness