ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಲವು ಬಿಜೆಪಿ ಶಾಸಕರು ಗೈರು…

ಬೆಂಗಳೂರು,ಆ,20,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಲವು ಬಿಜೆಪಿ ಶಾಸಕರು ಗೈರಾಗಿದ್ದು ಸಂಪುಟ ರಚನೆ ಬೆನ್ನಲ್ಲೆ ಅಸಮಾಧಾನ ಸ್ಪೋಟಗೊಂಡಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇಂದು ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 17 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಹಲವು ಬಿಜೆಪಿ ಶಾಸಕರು ಗೈರಾಗಿದ್ದು ಕಂಡು ಬಂದಿದೆ.

ಶಾಸಕರಾದ ಗೂಳಿಹಟ್ಟಿ ಶೇಖರ್,  ಎಂ.ಪಿ ರೇಣುಕಾಚಾರ್ಯ, ಜಿ.ಹೆಚ್ ತಿಪ್ಪಾರೆಡ್ಡಿ,  ಬಾಲಚಂದ್ರ ಜಾರಕಿಹೊಳಿ,  ಮುರುಗೇಶ್ ನಿರಾಣಿ, ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರವೀಂದ್ರನಾಥ್, ಚಂದ್ರಪ್ಪ, ಎಂ.ಪಿ ಕುಮಾರಸ್ವಾಮಿ ಸೇರಿ ಹಲವು ಶಾಸಕರು ಗೈರಾಗಿದ್ದಾರೆ. ಇವರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಹೀಗಾಗಿ ಸಂಪುಟ ರಚನೆ ಬಳಿಕ ಅಸಮಾಧಾನ ಸ್ಪೋಟಗೊಂಡಿದೆ ಎನ್ನಲಾಗಿದೆ.

Key words: Many –BJP MLA-absent – Sworn oath-function-bangalore