ಸರ್ಕಾರ ಉಳುವಿಗಾಗಿ ತಾಯಿ ಚಾಮುಂಡೇಶ್ವರಿ ಮೊರೆ ಹೋದ ಸಚಿವ ಹೆಚ್.ಡಿ ರೇವಣ್ಣ: ಸಿಎಂ ಹೆಚ್.ಡಿಕೆ ಹೆಸರಿನಲ್ಲಿ ವಿಶೇಷ ಪೂಜೆ…

Promotion

ಮೈಸೂರು,ಜು,19,2019(www.justkannada.in):  ಸಂಕಷ್ಟದ ಸ್ಥಿತಿಯಲ್ಲಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ರಕ್ಷಣೆಗಾಗಿ ಸಚಿವ ಹೆಚ್.ಡಿ ರೇವಣ್ಣ  ತಾಯಿ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ.

ಮ‌ೂರನೇಯ ಆಷಾಢ ಶುಕ್ರವಾರ ಹಿನ್ನೆಲೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಚಿವ ಹೆಚ್.ಡಿ ರೇವಣ್ಣ ಭೇಟಿ ನೀಡಿ, ಸರ್ಕಾರ ಉಳಿಸಲು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಾಯಿ ಚಾಮುಂಡೇಶ್ವರಿ ದರ್ಶನ ಬಳಿಕ ಮಾತನಾಡಿದ ಸಚಿವ ಹೆಚ್ ಡಿ ರೇವಣ್ಣ, ವಿಶ್ವಾ ಮತಕ್ಕಾಗಿಯೇ ಕುಮಾರಸ್ವಾಮಿ ಅವರು 12ನೇ ತಾರೀಖು ಕೇಳಿದ್ರು. 12ನೇ ತಾರೀಖು ಮೀಟಿಂಗ್ ಕರೆದಿತ್ತು. ಬಿಜೆಪಿಯವರು ಬಂದಿಲ್ಲ. 18ನೇ ತಾರೀಖಿನಂದು ಮತ್ತೆ ವಿಶ್ವಮತಕ್ಕೆ ಬಂದಿದ್ದವು.  ಆಗ ಸುಪ್ರೀಂ ಕೋರ್ಟ್ ಕೆಲವು ಡೈರೆಕ್ಷನ್ ನೀಡಿತ್ತು. ಇಲ್ಲಿ ಯಾರು ಕಾಲ ಹರಣ ಮಾಡ್ತಿದ್ದಾರೆ ಅಂತ ಜನ ನೊಡ್ತಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದು ಕೊಳ್ತಾರೆ ಎಂದರು.

ನೋಡ್ರಿ ಇದೇ ಬಿಜೆಪಿಯ ಈ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮತ ತೋರಿಸಲು ಹತ್ತು ದಿನ ಸಮಯ ತೆಗೆದು ಕೊಂಡಿದ್ರು. ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

Key words: minister- HD Revanna-visit- chamundeshwari hills-spacial worship