ಅವರ ವಿರುದ್ದ ನಾನು ಯಾವತ್ತೂ ಮಾತನಾಡಿಲ್ಲ- ‘ಕೈ’ ‘ತೆನೆ’ ನಾಯಕರಿಬ್ಬರ ವಾಕ್ಸಮರ ಕುರಿತು ಸಚಿವ ಜಿ.ಟಿ ದೇವೇಗೌಡರ ಪ್ರತಿಕ್ರಿಯೆ ಏನು ಗೊತ್ತೆ…?

ಮೈಸೂರು,ಮೇ,13,2019(www.justkannada.in): ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು ಈ ಕುರಿತು ಸಚಿವ ಜಿ.ಟಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ ಇದೆ. ಇನ್ನು ಹೆಚ್.ವಿಶ್ವನಾಥ್ ಅವರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬಾರದು ಎಂದು ಸಚಿವ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡರು, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಟ್ವಿಟ್ ಮಾಡಿದ್ದಾರಂತೆ. ಆದರೇ ಅದನ್ನು ನಾನು ನೋಡಿಲ್ಲ. ಅವರು ಮೊದಲು ಜಿಟಿಡಿ ಮಾತನಾಡಿದ್ರು, ಈಗ ವಿಶ್ವನಾಥ್ ಮಾತನಾಡಿದ್ದಾರೆ. ಆದ್ರೆ ಅವರೇನು ಚುನಾವಣೆ ಬಗ್ಗೆ ಮಾತನಾಡಿಲ್ಲ. ಆದರೇ ಅವರು ಯಾಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

23ರ ರಿಸಲ್ಟ್ ಬರುವವರೆಗೂ ಎಲ್ಲರ ಹೇಳಿಕೆಯೂ ವೆಸ್ಟ್…

ಹಾಗೆಯೇ ಸಿದ್ದರಾಮಯ್ಯ ವಿರುದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ಜಿ.ಟಿ ದೇವೇಗೌಡ,  ಜನಪ್ರತಿನಿಧಿಗಳು ಜವಬ್ದಾರಿಯಿಂದ ಮಾತನಾಡಬೇಕು‌. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಹೇಳಿದ್ದಾರೆ. ಇನ್ಯಾಕೇ ಬೇರೆ ಮಾತು. ಅವರ ಹೇಳಿಕೆಗಳನ್ನ ಗಂಭೀರವಾಗಿ ಪರಿಗಣಿಸಿಬಾರದು. 23ರ ರಿಸಲ್ಟ್ ಬರುವವರೆಗೂ ಎಲ್ಲರ ಹೇಳಿಕೆಯೂ ವೆಸ್ಟ್. ಯಾರು ಏನೇ ಹೇಳಿಕೆ ಕೊಟ್ಟರೂ ರಿಸಲ್ಟ್ ಬರೋವರೆಗೆ ಎಲ್ಲವು ವೆಸ್ಟ್ ಎಂದು ಜಿ.ಟಿ ದೇವೇಗೌಡ ನುಡಿದಿದ್ದಾರೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೆಂಪಲ್ ರನ್ ಬಗ್ಗೆ ಟೀಕಿಸಿದ ನಾಯಕರಿಗೆ ತಿರುಗೇಟು ನೀಡಿದ ಸಚಿವ ಜಿ.ಟಿ ದೇವೇಗೌಡ, ದೇವಸ್ಥಾನಕ್ಕೆ ಹೋಗೋದಕ್ಕೆ  ಟೀಕೆ ಟಿಪ್ಪಣೆಯೇ. ಯಾರು ದೇವಸ್ಥಾನಕ್ಕೆ‌ ಹೋಗಿಲ್ಲ..?. ಸಿಎಂ ಆಗಿದ್ದ ಎಲ್ಲರು ಹೋಗಿದ್ದಾರೆ, ಯಾಕೆ ಯಡಿಯೂರಪ್ಪ ಹೋಗಿಲ್ಲವಾ ಎಂದು ಪ್ರಶ್ನಿಸಿದರು.

ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೆ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಅಂತ ಕೇಳಿ. ಅದು ಬಿಟ್ಟು ಬೇರೆ ಮಾತು ಬೇಡ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಜಿ.ಟಿ ದೇವೇಗೌಡ ಚಾಟಿ ಬೀಸಿದರು.

Key words:-  Minister -GT Deve Gowda -reacted – talks- between –dosti-government- two leaders.