ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ: ವಿವಾದಕ್ಕೀಡಾಯ್ತು ನಟ ಕಮಲ್ ಹಾಸನ್ ಮತ್ತೊಂದು ಹೇಳಿಕೆ

0
478

ಚೆನ್ನೈ:ಮೇ-13:(www.justkannada.in) ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ ಆಗಿದ್ದ ಆತನೇ ನಾಥೂರಾಮ್ ಗೋಡ್ಸೆ ಎಂದು ಹೇಳುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟ, ಮಕ್ಕಳ್‌ ನೀದಿಮೈಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಚೆನ್ನೈನಲ್ಲಿ ಅರವಕುರುಚ್ಚಿ ವಿಧಾನಸಭೆ ಉಪಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಬಾಹುಳ್ಯದ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ.ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

ನಾನು ಗಾಂಧಿಯ ಮರಿಮೊಮ್ಮಗ. ನಾನು ಆ ಕೊಲೆಗೆ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ. ನಾನು ಎದೆಯ ಮೇಲೆ ಕೈಯಿಟ್ಟು ಹೇಳುತ್ತೇನೆ, ನಾನೊಬ್ಬ ಒಳ್ಳೆಯ ಭಾರತೀಯ, ದೇಶ ಶಾಂತಿಯುತವಾಗಿ ಇರಬೇಕೆಂದು ಬಯಸುವ ವ್ಯಕ್ತಿ. ಎಲ್ಲರಿಗೂ ಸಮಾನತೆ ಬಯಸುವ ಒಳ್ಳೆಯ ಭಾರತೀಯ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾಗಿರಬೇಕೆಂದು ಅವರು ಬಯಸಿದ್ದರು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

ಕಮಲ್ ಹಾಸನ್ ಈ ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ ಎಂದು ಕರೆದು, ಕಾಶ್ಮೀರದಲ್ಲಿ ಜನಮತಗಣನೆ ನಡೆಯಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈಗ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
Referring to Nathuram Godse, Kamal Haasan says India’s first terrorist was Hindu