ಬಚ್ಚಾ ಎಂದಿದ್ದ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಪಿ ಯೋಗೇಶ್ಚರ್…

Promotion

ಮಂಗಳೂರು,ಫೆಬ್ರವರಿ,27,2021(www.justkannada.in):  ತಮ್ಮನ್ನ ಬಚ್ಚಾ ಎಂದು ಕರೆದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ಸಿ.ಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.jk

ಈ ಕುರಿತು ಇಂದು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಪಿ ಯೊಗೇಶ್ವರ್, ಹೌದು ನಾನು ಬಚ್ಚಾನೇ.  ರಾಮನಗರಕ್ಕೆ ಬಂದಾಗ ಹೆಚ್.ಡಿ ಕುಮಾರಸ್ವಾಮಿ ಕೂಡ ಬಚ್ಚಾನೆ. ಹವಾಯ್ ಚಪ್ಪಲಿಯಲ್ಲಿ ಬಂದಿದ್ಗದರು. ಹೆಚ್.ಡಿ. ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡುವುದು ಬೇಡ ಎಂದು ಬಿಜೆಪಿ ಹಿರಿಯರಿಗೆ ಹೇಳಿದ್ದೇನೆ ಎಂದರು.

ಕುಮಾರಸ್ವಾಮಿ ಅವರು ನಂಬಿಕೆಗೆ ಅರ್ಹರಲ್ಲ, ಕುಮಾರಸ್ವಾಮಿ ಯಾರಿಗೆ ಬೇಕಾದರೂ ಸೂಕ್ತರಾಗುತ್ತಾರೆ. ಆ ಅರ್ಥದಲ್ಲಿ ಅವರು ಜೋಕರ್ ಎಂದು ಹೇಳಿದ್ದೇನೆ. ಅವರು ನನಗೆ ಬಚ್ಚಾ ಎಂದರೆ ನನಗೇನು ವ್ಯತ್ಯಾಸವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

minister-cp-yogeshwar-former-cm-hd-kumaraswamy-bachcha-statement
ಕೃಪೆ-internet

ಇಸ್ಟೀಟ್ ಹಣದಿಂದ ಸರ್ಕಾರ ಬೀಳಿಸಿದ್ರು ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಿಪಿ ಯೋಗೇಶ್ವರ್, ಇಸ್ಟಿಟ್ ಆಟ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಅವರು ಮಲೇಷ್ಯಾ, ಸಿಂಗಾಪುರದಲ್ಲಿ ಇಸ್ಟೇಟ್, ಬೇರೆ ಗ್ಯಾಂಬ್ಲಿಂಗ್ ಆಡಿದ ಫೋಟೋ ನನ್ನ ಬಳಿ ಇದೆ  ಸಮಯ ಬಂದಾಗ ರಿಲೀಸ್ ಮಾಡ್ತೇನೆ ಎಂದರು.

Key words: minister- CP Yogeshwar-former cm- HD kumaraswamy-Bachcha statement