ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ವಿಚಾರ ಕುರಿತು ಸ್ಪಷ್ಟನೆ ನೀಡಿದ ಸಚಿವ ಅಶ್ವಥ್ ನಾರಾಯಣ್.

Promotion

ಬೆಂಗಳೂರು,ಫೆಬ್ರವರಿ,11,2022(www.justkannada.in):  ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ವಿಚಾರ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕಾಲೇಜುಗಳಲ್ಲಿ ಮೊಬೈಲ್ ನಿಷೇಧದ ಬಗ್ಗೆ ಚಿಂತಿಸುತ್ತೇವೆ. ವಿದ್ಯಾರ್ಥಿಗಳ ಕಲಿಕೆಗೆ ಮೊಬೈಲ್ ಫೋನ್ ಪೂರಕ.   ಮೊಬೈಲ್ ನಲ್ಲಿ ಅನುಕೂಲ ಅನಾನೂಕುಲ ಎರಡು ಇದೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.

ಕೆಲ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಮಕ್ಕಳ ಜಾಗೃತಿ ಅಗತ್ಯ. ಕಾಲೇಜುಗಳಲ್ಲಿ ತರಗತಿಗಳು ಟ್ಯಾಬ್ ಬೇಸ್ ಮೇಲೆ ನಡೆಯುತ್ತಿವೆ.  ರಾಜ್ಯ ಸರ್ಕಾರ ವತಿಯಿಂಧ ಟ್ಯಾಬ್ ವಿತರಣೆ ಮಾಡುತ್ತಿದ್ದೇವೆ. ಮೊಬೈಲ್ ನಿಷೇಧ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.

Key words: Minister-Aswath Narayan- mobile- bans – colleges.