ಸುಪ್ರೀಂ ಆದೇಶ ಉಲ್ಲಂಘಿಸಿ 2011ನೇ ಸಾಲಿನ ಕೆಎಎಸ್ ಹುದ್ದೆಗಳ ನೇಮಕಾತಿ ಪಟ್ಟಿಗೆ ಮಸೂದೆ ಮಂಡನೆ ಖಂಡನೀಯ- ಕೆ ಎಸ್ ಶಿವರಾಮು.

ಮೈಸೂರು,ಫೆಬ್ರವರಿ,11,2022(www.justkannada.in): ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘಿಸಿ 2011ನೇ ಸಾಲಿನ ಕೆಎಎಸ್ ಹುದ್ದೆಗಳ ನೇಮಕಾತಿ ಪಟ್ಟಿಗೆ ಮಸೂದೆ ಮಂಡನೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೆ.ಎಸ್ ಶಿವರಾಮು, 2011ನೇ ಸಾಲಿನ ಕೆಎಎಸ್ ಹುದ್ದೆಗಳ ಆಯ್ಕೆಯಲ್ಲಿ ಭ್ರಷ್ಟಾಚಾರ, ಸ್ವಜ‌ನಪಕ್ಷಪಾತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕಾಗಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ತನಿಖಾ ವರದಿಯ ಆಧಾರದ ಮೇಲೆ ಸರ್ಕಾರ 2011ರ ನೇಮಕಾತಿಯನ್ನು ಹಿಂಪಡೆದಿತ್ತು.

ನಂತರ ಕೆಎಟಿ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳಲ್ಲೂ ಕೂಡ 2011ರ ನೇಮಕಾತಿಯ ಬಗ್ಗೆ ವಿಚಾರಣೆ ನಡೆದು ಅಕ್ರಮ ಆಗಿರುವುದು ಸಾಬೀತುಗಿರುವುದರಿಂದ ಸರ್ಕಾರದ ನಡೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದು ನೇಮಕಾತಿಯನ್ನು ರದ್ದುಗೊಳಿಸಿತ್ತು.

ಆದರೂ 1998, 1999, 2004ನೇ ಸಾಲಿನ ಕೆ ಎ ಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇದುವರೆಗೂ ಸರ್ಕಾರ ಜಾರಿಗೊಳಿಸದಿರುವುದು ಖಂಡನೀಯ. ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಯಥಾವತ್ ಜಾರಿಗೆ ಒತ್ತಾಯಿಸಿ ಇದೇ ಫೆಬ್ರುವರಿ 21ರಂದು ಬೆಂಗಳೂರಿಗೆ ವಾಹನ ಜಾಥಾ ನಡೆಸಲಾಗುವುದು ಎಂದು ಕೆ ಎಸ್ ಶಿವರಾಮು ಹೇಳಿದರು.

Key words: supreme court-KAS-KS Shivaramu