ಸಚಿವ ಅಶ್ವಥ್ ನಾರಾಯಣ್ ರಾಜ್ಯದ ಭಾವಿ ಮುಖ್ಯಮಂತ್ರಿ ಎಂದ ಬಿಜೆಪಿ ಎಂಎಲ್ ಸಿ.

Promotion

ಧಾರವಾಡ,ನವೆಂಬರ್,30,2022(www.justkannada.in): ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರನ್ನ ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ವಿಧಾನಪರಿಷತ್  ಬಿಜೆಪಿ ಸದಸ್ಯ ಅರುಣ್ ಶಹಾಪುರ ಹೇಳಿದ್ದಾರೆ.

ಧಾರವಾಡದಲ್ಲಿ ನಡೆದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅರುಣ್ ಶಹಾಪುರ,  ಅಶ್ವತ್ಥ್ ನಾರಾಯಣ ಈಗಾಗಲೇ ಡಿಸಿಎಂ ಆಗಿದ್ದಾರೆ. ಈಗಾಗಲೇ ಹನ್ನೊಂದು ಹೆಜ್ಜೆ ಆಗಿದೆ, ಇನ್ನೊಂದು ಹೆಜ್ಜೆ ಬಾಕಿಯಿದೆ. ನರೇಂದ್ರ ಮೋದಿ ಕಂಡ ಕನಸನ್ನು ರಾಜ್ಯದಲ್ಲಿ ನನಸು ಮಾಡುತ್ತಿದ್ದಾರೆ ಹಿಂದಿನ ಸರ್ಕಾರ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ರಾಮನಗರ ಅಂದ್ರೆ ಅಶ್ವತ್ಥ್ ನಾರಾಯಣ ಅನ್ನುವಂತಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದ ಭವಿಷ್ಯ ಅಶ್ವತ್ಥ್ ನಾರಾಯಣ ಕೈಯಲ್ಲಿದೆ. ರಾಜ್ಯಕ್ಕೆ ಅಶ್ವತ್ಥ್ ನಾರಾಯಣ ನೇತೃತ್ವ ಸಿಕ್ಕರೆ ಸುಭಿಕ್ಷೆ ಸಿಕ್ಕಂತೆ. ಅಶ್ವತ್ ನಾರಾಯಣ್ ರಾಜ್ಯದ ಭಾವಿ ಸಿಎಂ ಎಂದು ಹೇಳಿದರು.

Key words: Minister -Aswath Narayan – future –CM- BJP MLC –Arun shahapur