ಸಚಿವ ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರು: ರಾಜೀನಾಮೆ ನಿರ್ಧಾರ ಬೇಡವೆಂದು ಮನವಿ ಮಾಡ್ತೇನೆ- ಶಾಸಕ ಎಂ.ಪಿ ರೇಣುಕಾಚಾರ್ಯ.

Promotion

ನವದೆಹಲಿ,ಆಗಸ್ಟ್,11,2021(www.justkannada.in):  ತಾವು ನಿರೀಕ್ಷಿಸಿದ್ಧ ಖಾತೆ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಸಚಿವ ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರು, ಅವರಿಗೆ ರಾಜೀನಾಮೆ ನಿರ್ಧಾರ ಬೇಡವೆಂದು ಮನವಿ ಮಾಡ್ತೀನಿ ಎಂದು ತಿಳಿಸಿದ್ದಾರೆ.

ಸರ್ಕಾರ ಪತನವಾಗುವಲ್ಲಿ ಆನಂದ್ ಸಿಂಗ್ ಕೊಡುಗೆ ಮಹತ್ವದ್ದಾಗಿದೆ. ನಾನು ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ. ಅವರಿಗೆ ಒಳ್ಳೆಯ ಖಾತೆ ಸಿಗದಿರುವುದಕ್ಕೆ ಮೊದಲೂ ನೋವು ಇತ್ತು. ಈಗಲೂ ಅದೇ ವಿಚಾರವಾಗಿ ಅವರಿಗೆ ನೋವಾಗಿದೆ. ಸಿಎಂ ಹಾಗೂ ಪಕ್ಷದ ನಾಯಕರು ಆನಂದ್ ಸಿಂಗ್ ಅವರನ್ನು ಸಮಾಧಾನ ಪಡಿಸುತ್ತಾರೆ ಎಂದರು.

ನಾನು ಹೋರಾಟದ ಮೂಲಕವೇ ಬೆಳೆದು ಬಂದಿದ್ದೇನೆ. ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಜನರಿಗೆ ನಿರಾಸೆಯಾಗಿದೆ. ಸಚಿವನಾಗಿಲ್ಲವೆಂದು ನನಗೆ ಬೇಸರವಿಲ್ಲ. ನಾನು ಆಶಾವಾದಿಯಾಗಿದ್ದೇನೆ ಎಂದ ಶಾಸಕ ರೇಣುಕಾಚಾರ್ಯ,  ಕ್ಷೇತ್ರದ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ ಅವಕಾಶ ಸಿಕ್ಕರೆ ವರಿಷ್ಠರನ್ನ ಭೇಟಿಯಾಗುತ್ತೇನೆ ಎಂದು ಹೇಳಿದರು.

Key words: Minister -Anand Singh -MP MLA Renukacharya -appeals –no  resignation