ಕರ್ಪ್ಯೂ ನಡುವೆ ಇಂದಿನಿಂದ ಹಾಲು ಮಾರಾಟಕ್ಕೆ ಅನುಮತಿ….

kannada t-shirts

ಬೆಂಗಳೂರು,ಏಪ್ರಿಲ್,30,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು ಕರ್ಪ್ಯೂ ನಡುವೆ ಇಂದಿನಿಂದ ಹಾಲು ಮಾರಾಟಕ್ಕೆ  ಅನುಮತಿ ನೀಡಲಾಗಿದೆ. jk

ರಾಜ್ಯದಲ್ಲಿ ಕೊವಿಡ್ ಎರಡನೇ ಅಲೆ ಹಿನ್ನಲೆ, ರಾಜ್ಯದಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು ಅಗತ್ಯ ವಸ್ತುಗಳನ್ನು ಖರೀದಿಗೆ ಬೆಳಿಗ್ಗೆ ನಾಲ್ಕು ಗಂಟೆಗಳು ಮಾತ್ರ ಕಾಲಾವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳಲ್ಲಿ ಹಾಲು ಒಂದಾಗಿದೆ. ಹೀಗಾಗಿ ಬೆಳಿಗ್ಗೆ 10 ಗಂಟೆಯ ನಂತರ ಹಾಲು ಮಾರಾಟ ಮಳಿಗೆಗಳು ಬಾಗಿಲು ಮುಚ್ಚುತ್ತಿದ್ದವು.  ಇದರಿಂದ ಮಕ್ಕಳಿಗೆ ಹಾಲುಣಿಸಲು ಹೆಚ್ಚುವುದು ಹಾಲು ಖರೀದಿ ಹಾಗೂ ಶೇಖರಣೆ  ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. Milk- sales –allowed-today - curfew.

ಹೀಗಾಗಿ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ತನಕ ನಂದಿನಿ ಹಾಲು ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿ ಸರ್ಕಾರ ಕಾಲಾವಕಾಶ ವಿಸ್ತರಿಸಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಪತ್ರ ಹೊರಡಿಸಿದೆ.

Key words: Milk- sales –allowed-today – curfew.

website developers in mysore