ಮಧ್ಯಾಹ್ನದ ಬಿಸಿಯೂಟ: ವಿಶೇಷ ಔತಣಗಳನ್ನು ಏರ್ಪಡಿಸುವಂತೆ ಶಾಲೆಗಳಿಗೆ ಸೂಚನೆ.

Promotion

ಬೆಂಗಳೂರು, ಡಿಸೆಂಬರ್ 15, 2022(www.justkannada.in): ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಮಧ್ಯಾಹ್ನದ ಬಿಸಿಯುಟ ಯೋಜನೆಯಡಿ ವಿಶೇಷ ಔತಣಕೂಟಗಳನ್ನು ಏರ್ಪಡಿಸುವಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನಗಳ ಪ್ರಕಾರ, ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಸಮುದಾಯ ಔತಣಕೂಟಗಳನ್ನು ಆಯೋಜಿಸುವಂತೆ ತಿಳಿಸಿದೆ. ಉದಾಹರಣೆಗೆ, ಗ್ರಾಮದಲ್ಲಿ ಯಾವುದಾದರೂ ಹಬ್ಬವಿದ್ದರೆ, ಶಾಲಾ ಪ್ರಾಧಿಕಾರಗಳು ಮಕ್ಕಳಿಗೆ ಶಾಲೆಗಳಲ್ಲಿ ವಿಶೇಷ ಆಹಾರದ ವ್ಯವಸ್ಥೆಯನ್ನು ಒದಗಿಸುವಂತೆ ಗ್ರಾಮಸ್ಥರನ್ನು ಪ್ರೋತ್ಸಾಹಿಸಬೇಕು. ಈ ವಿಶೇಷ ಸಂದರ್ಭಗಳು ವಿವಾಹ, ಹುಟ್ಟಿದಹಬ್ಬ ಆಚರಣೆಗಳು, ಇತ್ಯಾದಿಗಳನ್ನು ಒಳಗೊಂಡಿವೆ.

ಆದರೆ ಈ ರೀತಿ ಆಯೋಜಿಸುವ ಔತಣಕೂಟಗಳು ಕೇವಲ ಸಸ್ಯಾಹಾರಿ ಮಾತ್ರ ಆಗಿರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. “ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ ಒದಗಿಸುವ ಆಹಾರ, ಸರ್ಕಾರ ಅನುಮೋದಿಸಿರುವ ಆಹಾರ ಉತ್ಪನ್ನಗಳ ಪಟ್ಟಿಯಲ್ಲಿರುವಂತೆ ಇರಬೇಕು, ವಿಶೇಷವಾಗಿ ಸಸ್ಯಾಹಾರ ಆಗಿರಬೇಕು,” ಎಂದು ಸುತ್ತೋಲೆ ತಿಳಿಸುತ್ತದೆ. ಶಾಲಾ ಅಭಿವೃದ್ಧಿ ಹಾಗೂ ನಿಗಾವಣಾ ಸಮಿತಿಗಳು ವಿಶೇಷ ಔತಣಕೂಟಗಳನ್ನು ಆಯೋಜಿಸುವಾಗ ಆಹಾರ ಸುರಕ್ಷತೆಯನ್ನೂ ಸಹ ಖಾತ್ರಿಪಡಿಸಬೇಕು.

ಇನ್ನೂ ಒಂದು ಹೆಜ್ಜೆ ಮುಂದುವರೆದು ಇಲಾಖೆಯು, ಮಧ್ಯಾಹ್ನದ ಬಿಸಿಯುಟ ಯೋಜನೆಯನ್ನು ಬಲಪಡಿಸುವ ಉದ್ದೇಶದಿಮದ ದಾನಿಗಳಿಂದ ಪ್ಲೇಟುಗಳು, ಮಿಕ್ಸಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ದಾನದ ರೂಪದಲ್ಲಿ ಪಡೆಯುವಂತೆ ಶಾಲೆಗಳಿಗೆ ತಿಳಿಸಿದೆ. ೨೦೧೫ರಲ್ಲಿ ಗುಜರಾತ್ ಸರ್ಕಾರವು ಮೊದಲ ಬಾರಿಗೆ ‘ತಿಥಿ ಭೋಜನ’ವನ್ನು ಪರಿಚಯಿಸಿತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: midday-meals-schools -arrange-special-lunches