ಬೆಂಗಳೂರು ಮೆಟ್ರೋ ನಿಗಮ ನಿಯಮಿತ ಅಧಿಕಾರಿಗಳ ಜತೆ ಸಭೆ: ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ ಡಿಸಿಎಂ ಅಶ್ವಥ್ ನಾರಾಯಣ್…

Promotion

ಬೆಂಗಳೂರು,ಸೆ,13,2019(www.justkannada.in):  ಬೆಂಗಳೂರು ಮೆಟ್ರೋ ನಿಗಮ ನಿಯಮಿತ ಅಧಿಕಾರಿಗಳೊಂದಿಗೆ ಉಪ ಮುಖ್ಯ ಮಂತ್ರಿಗಳಾದ ಡಾ ಸಿ ಎನ್ ಅಶ್ವಥ್ ನಾರಾಯಣರವರು ಸಭೆ ನಡೆಸಿ  ಹಲವು ವಿಚಾರಗಳ ಕುರಿತು ಚರ್ಚಿಸಿದರು.

ಕಳೆದ ಹತ್ತು ವರ್ಷ ಗಳಿಂದ ಬೆಂಗಳೂರಿನಲ್ಲಿ 42  ಕಿ ಮೀ  ಮೆಟ್ರೋ ರಸ್ತೆ ನಿರ್ಮಾಣವಾಗಿದ್ದು , ದೆಹಲಿ ಮೆಟ್ರೋದಲ್ಲಿ ಕಳೆದ ಏಳು ವರ್ಷದಲ್ಲಿ 210  ಕಿ ಮೀ ಮೆಟ್ರೋ ರಸ್ತೆ ನಿರ್ಮಾಣವಾಗಿದೆ. ಮೆಟ್ರೋ ರಸ್ತೆಯನ್ನು ತ್ವರಿತ ಗತಿಯಲ್ಲಿ ನಿರ್ಮಿಸಲು ಬೆಂಗಳೂರು ಮೆಟ್ರೋ ಎದುರಿಸುತ್ತಿರುವ ತೊಂದರೆಗಳ  ಬಗ್ಗೆ  ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲಾಯಿತು .

ಯಾವುದೇ ಸರಕಾರಿ ಯೋಜನೆಯನ್ನು ಜಾರಿಗೊಳಿಸಲು ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಲು ಬೇಕಾದ ಒಂದು ವಿಶೇಷ ವಾರ್ ರೂಮ್ ಮಾದರಿಯ ವ್ಯವಸ್ಥೆಯನ್ನು ಜಾರಿ ಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು ಅದನ್ನು ಅಭ್ಯಸಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಿಯೋಗವೊಂದು ಮುಂಬೈಗೆ ಹೋಗಲು ನಿರ್ಧರಿಸಲಾಯಿತು. ಕರ್ನಾಟಕ ಸರಕಾರದ ನಗರಾಭಿವೃದ್ಧಿ  ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ  ಮೆಟ್ರೋರೈಲು ನಿಗಮದ ಅಧ್ಯಕ್ಷ  ಅಜಯ್ ಸೇಠ್ ಇದ್ದರು.

Key words: Meeting – DCM -Ashwath Narayan -Bangalore -Metro Corporation – Officers