ಮುಂಬೈ ಹೋಟೆಲ್ ನಲ್ಲಿ ಶಾಸಕರ ಭೇಟಿಗೆ ಅವಕಾಶ ನೀಡದೆ ತಡೆದ ವಿಚಾರ: ಕಾನೂನು ಹೋರಾಟ ಮಾಡುತ್ತೇನೆಂದ ಸಚಿವ ಡಿ.ಕೆ ಶಿವಕುಮಾರ್…

Promotion

ಬೆಂಗಳೂರು,ಜು,11,2019(www.justkannada.in): ಶಾಸಕರ ಭೇಟಿಗೆ ಅಲ್ಲಿನ ಸರ್ಕಾರಕ್ಕೆ ತಿಳಿಸಿಯೇ ಹೋಗಿದ್ದವು. ಆದರೆ ಹೋಟೆಲ್ ರೋಂ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ನಮ್ಮನ್ನ ಹೋಟೆಲ್ ಒಳಗೆ ಬಿಡಲಿಲ್ಲ. ಈ ಸಂಬಂಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ , ನಾವು ಅಧಿಕೃತವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಮುಂಬೈಗೆ ಹೋಗಿದ್ದೆ, ಹೋಟೆಲ್ ರೂಂ ಬುಕ್ ಮಾಡಿದ್ದೇವು.  ಆದರೆ ರೂಮ್  ಕ್ಯಾನ್ಸಲ್ ಮಾಡಿ, ಹೋಟೆಲ್ ಒಳಗೆ ಹೋಗದಂತೆ ತಡೆಯಲಾಯಿತು. ನನಗೆ ಸ್ನಾನ ಮಾಡಲು ಅವಕಾಶ ನೀಡಲಿಲ್ಲ, ಈ ಸಂಬಂಧ ನಾನು ಕಾನೂನು ಹೋರಾಟ ನಡೆಸುತ್ತೇನೆ  ಎಂದರು.

ಹೋಟೆಲ್ ಬುಕ್ ಮಾಡಿಯೇ ಅಲ್ಲಿಗೆ ತೆರಳಿದ್ದರು. ಅದರೆ ನಮ್ಮ ಶಾಸಕರ ಭೇಟಿಗೆ ಅವಕಾಶ ನೀಡಲಿಲ್ಲ. ಹೋಟೆಲ್ ಒಳಗೆ ನಮ್ಮನ್ನ ಬಿಡಲಿಲ್ಲ.  ಮುಂಬೈನಿಂದ ನನ್ನನ್ನ ಹೊರಗೆ ಹಾಕಿದ್ರು. ನನಗೆ ಸ್ನಾನ ಮಾಡಲೂ ಅವಕಾಶ ಕೊಡಲಿಲ್ಲ, ಪೊಲೀಸರು ಹೋಟೆಲ್ ಹೋಗದಂತೆ ತಡೆದಿದ್ದಾರೆ. ಹೋಟೆಲ್ ಮೇಲೆ ಹಾಗೂ ತಡೆದಿದ್ದವರ ಮೇಲೆ ಮುಂದಿನ ಕ್ರಮ ಕೈಗೊಳ್ತೀನಿ, ಕಾನೂನು ತಜ್ಙರ ಸಲಹೆ ಪಡೆದು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ಶಾಸಕರು ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ….

ಇನ್ನು ಯಾವುದೇ ಸಮಯದಲ್ಲಿ ರಾಜಕೀಯ ಬದಲಾಗಬಹುದು. ಶಾಸಕರು ನಮ್ಮ ಜತೆ ಇದ್ದಾರೆ. ಅವರ ಮೇಲೆ ನಂಬಿಕೆ ಇದೆ. ಶಾಸಕರು ವಾಪಸ್ ಬರ್ತಾರೆ. ಶಾಸಕರು ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ. ಸಿಎಂ ರಾಜೀನಾಮೆ ನೀಡಲ್ಲ. ಸಂಜೆಯವರೆಗೂ ನಮಗೆ ಅವಕಾಶವಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

Key words: meet- MLA-Mumbai –hotel-Minister- DK Sivakumar -legal fight