ಕೇಂದ್ರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ಜ.26 ರಂದು ಬೃಹತ್ ಪ್ರತಿಭಟನಾ ರ್ಯಾಲಿ- ಕೋಡಿಹಳ್ಳಿ ಚಂದ್ರಶೇಖರ್..

Promotion

ಬೆಂಗಳೂರು,ಜನವರಿ,21,2021(www.justkannada.in): ಜನವರಿ 26ರಂದು ದೆಹಲಿಯಲ್ಲಿ ನಡೆಯುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯದಲ್ಲೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ರೈತಮುಖಂಡ  ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.jk

ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್,  ಕೇಂದ್ರ ಸರ್ಕಾರ ನಡೆಸಿದ ರೈತರ ಜೊತೆಗಿನ ಮಾತುಕತೆ ವಿಫಲವಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮತ್ತಷ್ಟು ತೀವ್ರವಾಗಿದೆ. ಜನವರಿ 26ರಂದು ದೆಹಲಿಯಲ್ಲಿ ನಡೆಯುವ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಜನವರಿ26ರಂದು ದೇಶದ ಪ್ರಧಾನಿ ಹಾಗೂ ರಾಜ್ಯದ ಸಿಎಂ ಧ್ವಜಾರೋಹಣ ಮಾಡಿ‌ ದೇಶಕ್ಕೆ ನಾಡಿಗೆ ಸಂದೇಶ ನೀಡುತ್ತಾರೆ. ಧ್ವಜಾರೋಹಣ ನಡೆಯುವವರೆಗೂ ಯಾವುದೇ ಪ್ರತಿಭಟನೆ ಇರುವುದಿಲ್ಲ. ಧ್ವಜಾರೋಹಣ ಮಾಡಿ ಸಂದೇಶ ನೀಡಿದ ಬಳಿಕ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಲಿದೆ.  ಕೇಂದ್ರದ ಮೂರು ಕಾಯ್ದೆಗಳ ವಿರುದ್ಧ ರೈತಸಂಘಟನೆಗಳಿಂದ ಬೃಹತ್ ಹೋರಾಟ ನಡೆಯಲಿದೆ ಎಂದರು.

ದೇಶದ ಕೆಲವೇ ಶ್ರೀಮಂತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಜಾರಿಗೆ ತರಲಾಗಿದೆ. ದೇಶದ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿವೆ. ಕೃಷಿಯನ್ನೇ ಬುಡಮೇಲು ಮಾಡುವ ಕೆಲಕ್ಕೆ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರ ಜಾರಿಗೆ ತಂದ ಕಾನೂನನ್ನು ಕರ್ನಾಟಕ ಸರ್ಕಾರ ಆತುರದಿಂದ ಜಾರಿಗೆ ತರುತ್ತಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಿ ಸಂವಿಧಾನ ಬುಡಮೇಲು ಮಾಡಲಾಗುತ್ತಿದೆ. ಭೂಸುಧಾರಣಾ ಕಾಯ್ದೆ, ಗೋಹತ್ಯೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕ ಹಾಗಾಗಿ ರೈತ ವಿರೋಧಿ ಕಾಯ್ದೆಗಳ ಮೂಲಕ ಬೃಹತ್ ರ್ಯಾಲಿ ಮಾಡಲಾಗುತ್ತಿದೆ. ಬೃಹತ್ ಪರೇಡ್ ನಲ್ಲಿ  ಟ್ಯಾಬ್ಲೋ ಗಳು ಕೂಡಾ ಭಾಗಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.Massive rally- Jan. 26 -protest -against –Center-. Kodihalli Chandrasekhar.

ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ‌ಯಲ್ಲಿ ಟ್ರ್ಯಾಕ್ಟರ್, ಬೈಕ್, ಬಸ್ಸು, ಕಾರು ಸೇರಿ ಸುಮಾರು 8ಸಾವಿರ ವಾಹನಗಳು ಲಕ್ಷಾಂತರ ಜನ ರೈತರು ಭಾಗಿಯಾಗಲದ್ದಾರೆ ಎಂದು ತಿಳಿಸಿದರು.

Key words: Massive rally- Jan. 26 -protest -against –Center-. Kodihalli Chandrasekhar.