ಪೇಜಾವರ ಶ್ರೀಗಳ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು……

Promotion

ಉಡುಪಿ,ಡಿ,24,2019(www.justkannada.in):  ಶ್ವಾಸಕೋಶ ಸೋಂಕು ಹೊರತು ಉಳಿದ ಯಾವ ಸಮಸ್ಯೆಯೂ ಶ್ರೀಗಳಿಗೆ ಇಲ್ಲ. ಶ್ರೀಗಳು ಹೊಸ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಪೇಜಾವರಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು, ಶ್ರೀ ಗಳವರು ಆರೋಗ್ಯವಾಗಿದ್ದಾರೆ, ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದಾರೆ.  ಅಂತೆ ಕಂತೆ ಸುದ್ಧಿಗಳಿಗೆ ನಾವು ಉತ್ತರಿಸಬೇಕಾಗಿಲ್ಲ, ಆದರೆ ಏರ್ ಲಿಫ್ಟ್ ಮಾಡುವಂತಹ ಯಾವುದೇ ಯೋಜನೆ ಇಲ್ಲ, ಪ್ರತಿಕೂಲ ಪರಿಸ್ಥಿತಿ ಇಲ್ಲ. ವಯಸ್ಸು ಆಗಿರುವುದರಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು.. ಇರುವಂತಹ ಸತ್ಯಸಂಗತಿ ತಿಳಿಸಲು ಮಾಧ್ಯಮ ಗೋಷ್ಠಿ ಕರೆದಿದ್ದೇವೆ  ಎಂದು ತಿಳಿಸಿದರು.

Key words:  Manipal -KMC Hospital – Doctors – information –pejavar shree-Health