ಸ್ನೇಹಿತರ ಜತೆ ಪಿಕ್ನಿಕ್ ಗೆ ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು….

Promotion

ಮಂಗಳೂರು,ಸೆಪ್ಟಂಬರ್,3,2020(www.justkannada.in):  ಸ್ನೇಹಿತರ ಜತೆ ಪಿಕ್ನಿಕ್ ಗೆಂದು ತೆರಳಿದ್ದ ಯುವಕ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.jk-logo-justkannada-logo

ಮಂಗಳೂರಿನ ಕಿನ್ನಿಗೋಳಿ ಕರ್ನಿರೆ ಬಳಿ ಈ ಘಟನೆ ನಡೆದಿದೆ.  ಬೆಂಗಳೂರು ಮೂಲದ 32 ವರ್ಷದ ಯುವಕ ಅನಿಲ್ ಮೃತಪಟ್ಟವರು. ಮೃತ ಯುವಕ ಅನಿಲ್ ತನ್ನ 7 ಜನ ಸ್ನೇಹಿತರ ಜತೆ ಪಿಕ್ನಿಕ್ ಗೆಂದು ತೆರಳಿದ್ದರು. ಈ ನಡುವೆ ಮಂಗಳೂರಿನ ಕಿನ್ನಿಗೋಳಿ ಕರ್ನಿರೆ ಬಳಿ ಶಾಂಭವಿ ನದಿಯಲ್ಲಿ ಅನಿಲ್ ಸೇರಿ ಮೂವರು ಸ್ನೇಹಿತರು ಈಜಲು ನದಿಗೆ ಇಳಿದಿದ್ದಾರೆ.mangalore-bangalore-youth-death-water

ಈ ವೇಳೆ ನೀರಿನ ಸೆಳತಕ್ಕೆ ಸಿಲುಕಿ ಮೂವರು ಪರದಾಡಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರು ಇಬ್ಬರನ್ನ ರಕ್ಷಿಸಿದ್ದಾರೆ. ಆದರೆ ಅನಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ  ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mangalore- Bangalore- Youth –death-water