ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.

ಮಂಡ್ಯ,ನವೆಂಬರ್,11,2021(www.justkannada.in): ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಗ ದಾನ ಮಾಡುವ ಮೂಲಕ  ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆ ತೂಬಿನಕೆರೆಯ ಹನುಮಂತು ಪೂರ್ಣಿಮಾ ದಂಪತಿ ಪುತ್ರ ಹೇಮಂತ ಕುಮಾರ್ (27)  ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ. ರೈತರಾಗಿದ್ದ ಹೇಮಂತ್ ಕುಮಾರ್ ಕಳೆದ ಗುರುವಾರ ಮರದಿಂದ ಬಿದ್ದಿದ್ದರು. ಹೇಮಂತ್ ಕುಮಾರ್ ರನ್ನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು.

ಆದರೆ ಹೇಮಂತ್ ಕುಮಾರ್  ಮೆದಳು ನಿಷ್ಕ್ರಿಯವಾಗಿದ್ದು ಈ ಹಿನ್ನೆಲೆಯಲ್ಲಿ ಯುವಕನ ಅಂಗಾಗ ದಾನ ಮಾಡಲಾಗಿದೆ. ಹೃದಯದ ಕವಾಟ, 2 ಕಿಡ್ನಿ, 1 ಲಿವರ್ ದಾನ ಮಾಡಲಾಗಿದ್ದು ಈ ಮೂಲಕ ಯುವಕ ಹೇಮಂತ್ ಕುಮಾರ್ ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Key words: mandya- young man –death- Organ -donation

ENGLISH SUMMARY…

A youth sets example for others by donating organs post death
Mandya, November 11, 2021 (www.justkannada.in): A youth lost his life after falling from a coconut tree. His family members have set an example by donating his organs as per his wish.
The incident took place at Toobinakere Village, in Mandya District. The deceased is identified as Hemanth Kumar (27), son of Hanumanthu and Poornima couple. On Thursday, he fell from the coconut tree and was hospitalized.
Following confirmation by the doctors about his brain dysfunction, the family members decided to donate his organs. Accordingly, the heart, two kidneys and a liver were donated. Thus the deceased Hemanth Kumar has given life to four people and has set an example for all others to follow.
Keywords: Organ donation/ Mandya District/ example/ youth falls from coconut tree