ಸಂಸದೆ ಸುಮಲತಾ ಅಂಬರೀಶ್ ಗೆ ಪರೋಕ್ಷ ಟಾಂಗ್: ಹೆಚ್,ಡಿಕೆ ಪರ ಬ್ಯಾಟ್ ಬೀಸಿದ ಪ್ರತಾಪ್ ಸಿಂಹ.

ಮೈಸೂರು,ಜುಲೈ,8,2021(www.justkannada.in): ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವೆ ಮಾತಿನ ಕಾಳಗ ನಡೆಯುತ್ತಿದ್ದು ಈ ಸಂಬಂಧ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

ಕೆಆರ್ ಎಸ್  ಡ್ಯಾಂನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿರುವ  ಮೈಸೂರು ಸಂಸದ ಪ್ರತಾಪ್ ಸಿಂಹ, ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದು  ಪರೋಕ್ಷವಾಗಿ ಸಂಸದೆ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.

ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸಂಸದೆ ಸುಮಲತಾರಿಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರೇ ಏನ್ ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿ ಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ ಎಂದು ಸುಮಲತಾ ಅಂಬರೀಶ್ ಗೆ ಲೇವಡಿ  ಮಾಡಿದರು.

ಕೆ ಆರ್ ಎಸ್ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವುದು ಸಮಸ್ಯೆ ಇಲ್ಲ ಅಲ್ಲಿಯ ಅಧಿಕಾರಿಗಳೇ ನನಗರ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಬಿಡಲಿಲ್ಲ. ಸುಳ್ಳು ನೆಪಗಳನ್ನ ಹೇಳಿ ಕೆಲಸ ಮಾಡಲು ಅಡ್ಡಿಪಡಿಸಿದ್ರು ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ದ ಆರೋಪ ಮಾಡಿದರು.

ಕೊರೊನಾ 3ನೇ ಅಲೆ ಕುರಿತು ಸಿಎಂ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಎಚ್ಚರಿಕೆಯನ್ನ ಗಂಭೀರವಾಗಿ ಪರಿಣಗಣಿಸಿಬೇಕು. ಪಕ್ಕದ ಕೇರಳದಲ್ಲಿ ಕೊರೊನಾ ಜಾಸ್ತಿಯಾಗಿದೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಕೂಡಾ ಮುಖ್ಯ ಎಂದರು.

ENGLISH SUMMARY….

MP Pratap Simha talks in support of HDK
Mysuru, July 8, 2021 (www.justkannada.in): Reacting to the tussle between Mandya MP Sumalatha Ambareesh and former Chief Minister H.D. Kumaraswamy over the alleged crack that appeared in the KRS dam, Mysuru, and Kodagu MP Pratap Simha has spoken in support of the former Chief Minister.
“When the officials themselves have clarified that the KRS dam is safe and there are no cracks, it is incorrect to say that the dam has developed cracks,” he said.
Reacting to the visit of the Mandya MP to the illegal mining site, Pratap Simha asked the media persons not to consider her statement as true and advised them to check the facts. “Politicians may say anything. Nobody has stopped them. This is just politics,” he said sarcastically.
“I have spoken to the KRS officials. There is no such problem. Earlier also, she tried to stop the construction of the Mysuru-Bengaluru ten-lane road. She tried to trouble giving false reasons,” he added.
Keywords: MP Sumalatha Ambareesh/ MP Pratap Simha/ supports former CM HDK

Key words: Mandya- MP-Sumalatha Ambarish-MP Pratap simha-batting –HD kumaraswamy