ಸಂಸದೆ ಸುಮಲತಾ ಅಂಬರೀಶ್ ಮೀರ್ ಸಾದಿಕ್ ಎಂದು ಜೆಡಿಎಸ್ ಶಾಸಕ ಕಿಡಿ.

Promotion

ಮಂಡ್ಯ,ಜುಲೈ,7,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ಬೆನ್ನಲ್ಲೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದರು.jk

ಇದೀಗ ಮತ್ತೆ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ,  ಸುಮಲತಾ ಅಂಬರೀಶ್ ಮೀರ್ ಸಾದಿಕ್ ಎಂದಿದ್ದಾರೆ.

ಮೈಷುಗರ್ ಕಾರ್ಖಾನೆಯನ್ನ ಯಾರಿಗೆ ಕೊಡಿಸಲು ಹೊರಟಿದ್ದೀರಿ. ಮಂಡ್ಯದ ಜನ ಸರ್ಕಾರದ ಸ್ವಾಮ್ಯಕ್ಕೆ ನೀಡಬೇಕು ಎನ್ನುತ್ತಿದ್ದಾರೆ. ಆದರೆ ನೀವು ಮೈಷುಗರ್ ಕಾರ್ಖಾನೆ ಯಾರಿಗೆ ಕೊಡಿಸಲು ಕಮಿಟ್ ಆಗಿದ್ದೀರಿ. ನಾವು ಹುಟ್ಟು ರಾಜಕಾರಣಿಗಳು. ನೀವು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದಿದ್ದೀರಿ. ನಮ್ಮ ಜಿಲ್ಲೆಯನ್ನ ಹೇಗೆ ನಿರ್ವಹಿಸಬೇಕು ಎಂದು ಗೊತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

Key words: mandya-JDS –MLA- against-Sumalatha Ambarish -Meer Sadiq