29 ವರ್ಷದ ಬಳಿಕ ತಾಯಿಗಾಗಿ ಮಗಳ ಹುಡುಕಾಟ: ಸ್ವೀಡನ್ ನಿಂದ ಮಂಡ್ಯಗೆ ಬಂದ ಪುತ್ರಿಗೆ ಶಾಕ್…..

kannada t-shirts

ಮಂಢ್ಯ,ಫೆ,23,2020(www.justkannada.in):  29 ವರ್ಷದ ಬಳಿಕ ತನ್ನ ತಾಯಿಯನ್ನ ಹುಡುಕಿಕೊಂಡು ಪುತ್ರಿಯೊಬ್ಬರು ಸ್ವೀಡನ್ ನಿಂದ ಮಂಡ್ಯಗೆ ಬಂದಿದ್ದಾರೆ.

ಹೌದು ಜೋಲಿ ಎಂಬುವವರು ತನ್ನ ಪತಿ ಜತೆ ಸ್ವೀಡನ್ ದೇಶದಿಂದ ಮಂಡ್ಯ ಜಿಲ್ಲೆ ಮದ್ದೂರಿಗೆ ತಂದೆ-ತಾಯಿಯನ್ನು ಹುಡುಕಿಕೊಂಡು ಬಂದದ್ದಾರೆ.  29 ವರ್ಷದ ಬಳಿಕ ಬಂದಿರುವ ಜೋಲಿ ತಂದೆ-ತಾಯಿ ಸಂಬಂಧಿಕರನ್ನು ಹುಡುಕತೊಡಗಿದ್ದಾರೆ. ಜೋಲಿ ಮಂಡ್ಯ ಜಿಲ್ಲೆ ಮದ್ದೂರಿನ ಜಯಮ್ಮ, ಬೋರೇಗೌಡ ದಂಪತಿಯ ಪುತ್ರಿ ಎಂದು ಹೇಳಲಾಗುತ್ತಿದೆ. ಜಯಮ್ಮ ಮತ್ತು ಬೋರೆಗೌಡ ಕಳೆದ 29 ವರ್ಷದ ಹಿಂದೆ ಅಂದರೇ ಜೋಲಿ 6 ವರ್ಷದ ಬಾಲಕಿಯಾಗಿದ್ದ ವೇಳೆ  ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು.

ಜಯಮ್ಮ ಅವರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆಗೆ ಬಂದಿದ್ದ ಜಯಮ್ಮ ಮಗಳನ್ನು ಸಾಕಲಾಗದೇ ಬೆಂಗಳೂರು ಇಂದಿರಾನಗರದಲ್ಲಿರುವ ಆಶ್ರಯ ದತ್ತು ಕೇಂದ್ರದಲ್ಲಿ ಮಗಳನ್ನು ಬಿಟ್ಟು ಹೋಗಿದ್ದರು. ಈ ವೇಳೆ ಸ್ವೀಡನ್ ದೇಶದ ದಂಪತಿ ಜೋಲಿ ಅವರನ್ನ ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿ ಸಾಕಿದ್ದರು.

ಇನ್ನು ಇತ್ತೀಚೆಗೆ ಜೋಲಿಗೆ  ತನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡ ಕನಸು ಬಿದ್ದಿದೆ. ಇದೇ ವೇಳೆ ಜೋಲಿ ತನ್ನ ಪೋಷಕರ ಬಳಿ ತಾನು ಯಾರು ಎಂಬುದನ್ನು  ಪ್ರಶ್ನಿಸಿದ್ದು,  ಪೋಷಕರು 29 ವರ್ಷದ ಹಿಂದೆ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದಾದ ಬಳಿಕ ಜೋಲಿ ತನ್ನ ತಂದೆ ತಾಯಿಯನ್ನ ಹುಡುಕಿಕೊಂಡು ಮಂಡ್ಯಗೆ ಬಂದಿದ್ದಾರೆ. ಆದರೆ ಮಂಡ್ಯಗೆ ಬಂದ ಜೋಲಿಗೆ ಶಾಕಿಂಗ್ ಸುದ್ದಿ ಕಾದಿತ್ತು. .ಆಕೆಗೆ ಕನಸು ಬಿದ್ದಂತೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದಿದೆ. ತಾನು ಚಿಕ್ಕವಳಿದ್ದಾಗ ಓಡಾಡಿದ್ದ ನಾಲೆಯ ಬಳಿಯೇ ತಾಯಿ ಆತ್ಮಹತ್ಯೆ ಮಾಡಿಕೊಂಡಂತೆ ಕನಸು ಬಿದ್ದಿದ್ದಾಗಿ ಜೋಲಿ ಹೇಳಿದ್ದಾರೆ. ನಾಲೆಯ ಬಳಿಗೆ ಬಂದ ಜೋಲಿ ಇಲ್ಲೇ ಓಡಾಡಿದ್ದಾಗಿ ಹೇಳಿದ್ದಾರೆ. ಆದರೆ, ಜನರಿಗೆ ಆಕೆ ಹೇಳಿದ ಜಯಮ್ಮ, ಬೋರೇಗೌಡರ ಬಗ್ಗೆ ಮಾಹಿತಿ ತಿಳಿದಿಲ್ಲ.

Key words: mandya-Daughter- search – mother- after -29 years.

website developers in mysore