ಮಂಡ್ಯ ಜಿಲ್ಲೆಯಲ್ಲಿ 134 ಮಂದಿ ‘ ಸ್ವ-ಗೃಹನಿರ್ಬಂಧ’ : ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್

 

ಮಂಡ್ಯ, ಮಾ.27, 2020 : (www.justkannada.in news) ಜಿಲ್ಲಾದ್ಯಂತ 134 ಜನ ಹೋಂ ಕೊರಂಟೈನ್ ನಲ್ಲಿ ಇದ್ದಾರೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಹೇಳಿಕೆ.

ಪ್ರತಿ ನಿತ್ಯ14 ದಿನ ರೋಗ ಲಕ್ಷಣದ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ.ಕೊರೋನಾ ಚಿಕಿತ್ಸೆಗಾಗಿ ಮಿಮ್ಸ್‌ನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ 9 ಫ್ಲ್ಯೂ ಕ್ಲಿನಿಕ್ ನಿಗಧಿ ಮಾಡಿದ್ದೇವೆ.

mandya-covid.19-dc-corona-virus

ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ 19 ಪ್ರಕರಣಗಳ ಕುರಿತು ಚಿಕಿತ್ಸೆ. ಖಾಸಗಿ ಆಸ್ಪತ್ರೆ ಮಾಲೀಕರ ಜೊತೆ ಸಭೆ ಮಾಡಲಾಗಿದೆ. ಖಾಸಗಿ ವೈದ್ಯರು ಸೂಕ್ತ ರಕ್ಷಣೆ ಕೋರಿದ್ದಾರೆ. ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದನೆ.
ಜನತೆ ಸಂಯಮದಿಂದ ವರ್ತಿಸಬೇಕು.ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿದರೆ ಚಿಕಿತ್ಸೆ ನೀಡಿ ಮಿಮ್ಸ್‌ಗೆ ರೆಫರ್ ಮಾಡಲಿದ್ದಾರೆ. ಕೋವಿಡ್ ಬಾಧಿತ ಪ್ರದೇಶದಿಂದ ಬಂದವರು ನೇರವಾಗಿ ಮಿಮ್ಸ್‌ಗೆ ದಾಖಲು.
ವೈದ್ಯರ ಮೇಲೆ ದರ್ಪ ತೋರಿದರೆ ಐಪಿಸಿ188ರ ಪ್ರಕಾರ ಕ್ರಮ. ಮಂಡ್ಯವನ್ನ ಕೋವಿಡ್ ಮುಕ್ತ ಮಾಡಲು ಪಣ.

key words : mandya-covid.19-dc-corona-virus