ಮಾನಸ ಗಂಗೋತ್ರಿ ಪ್ರಾಯೋಗಿಕ ಸಂಚಿಕೆ ಬಿಡುಗಡೆ.. 

kannada t-shirts

ಮೈಸೂರು, ಆಗಸ್ಟ್.26,2022(www.justkannada.in):  ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಿಂದ ಪ್ರತಿವಾರ ಬಿಡುಗಡೆಯಾಗುವ ಮಾನಸಗಂಗೋತ್ರಿ ಎಂಬ ವಿದ್ಯಾರ್ಥಿ ಪ್ರಾಯೋಗಿಕ ಪತ್ರಿಕೆಯನ್ನು  ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್  ಬಿಡುಗಡೆಗೊಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮದಲ್ಲಿನ ಪ್ರಾಯೋಗಿಕ ಪತ್ರಿಕಾ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ   ಅವರು, ಪತ್ರಿಕೋದ್ಯಮ ವಿಭಾಗ ಇಡೀ ಕರ್ನಾಟಕದಲ್ಲಿ ಮೊದಲು ಪ್ರಾರಂಭವಾಗಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೈಸೂರು ವಿಶ್ವವಿದ್ಯಾಲಯದ ಕೊಡುಗೆ ಅಪಾರವಾಗಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಯುವ ಜನತೆ ಬದ್ಧತೆ, ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದರು.

ನೀವು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಎಂತಹದ್ದೇ ಅಡೆತಡೆಗಳನ್ನು ಎದುರಿಸಬಹುದು ಎಂದು ಅವರು ಕಿವಿಮಾತು ಹೇಳಿದರು.

ನಂತರ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ಪಂದಿಸುವುದರ ಜೊತೆಗೆ ಬರವಣಿಗೆ ತಂತ್ರಜ್ಞಾನದ ಒಲವು, ಜೊತೆಗೆ ಕಾನೂನಿನ ವರದಿಯ ಬಗ್ಗೆ  ಸವಿವರವಾಗಿ  ತಿಳಿಸಿದರು. ಕಾನೂನು ವಿಷಯ ವರದಿ ಮಾಡಬೇಕಾದರೆ ಅತಿ ಸೂಕ್ಷ್ಮತೆಯಿಂದ ವರದಿಯನ್ನು ಸಲ್ಲಿಸಬೇಕು ಕಾನೂನಿನ ಬಗ್ಗೆ ಅರಿವಿರಬೇಕು. ಆಗ ಮಾತ್ರ ಕಾನೂನಾತ್ಮಕವಾಗಿ ರೂಪಗೊಳ್ಳಬೇಕಾದ ವರದಿ ಜೀವಬಂದಂತಿರುತ್ತದೆ. ಎಂದು ಹೇಳಿದರು.

ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ ಕೆ ಪುಟ್ಟಸ್ವಾಮಿ, ಪ್ರೊ.ಎಂ.ಎಸ್. ಸಪ್ನಾ,  ಅತಿಥಿ ಉಪನ್ಯಾಸಕರಾದ ಡಾ.ಕೆ.ಎಸ್.  ಕುಮಾರಸ್ವಾಮಿ, ಡಾ. ಗೌತಮ್ ದೇವನೂರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪತ್ರಿಕೋದ್ಯಮದಲ್ಲಿನ ಸ್ನಾತಕೋತರ ವಿದ್ಯಾರ್ಥಿಗಳು ಹಾಜರಿದ್ದರು.

Key words: Manas Gangotri – Experimental- paper-student- released.

website developers in mysore