ಮ್ಯಾನ್ v/s ವೈಲ್ಡ್ : ಹುಲಿ ಹೆಜ್ಜೆಯೊಂದಿಗೆ ತಲೈವಾ ಎಂಟ್ರಿ ಕೊಡುವ ಟೀಸರ್ ರಿಲೀಸ್…

Promotion

ಮೈಸೂರು,ಫೆ,27,2020(www.justkannada.in):  ತೀವ್ರ ಕುತೂಹಲ ಕೆರಳಿಸಿರುವ ಮ್ಯಾನ್ v/s ವೈಲ್ಡ್  ಕಾರ್ಯಕ್ರಮದ ಟೀಸರ್ ಅನ್ನ ಡಿಸ್ಕವರಿ ಚಾನೆಲ್ ಬಿಡುಗಡೆ ಮಾಡಿದೆ.

41ಸೆಕೆಂಡ್ ಗಳ ಟೀಸರ್ ಬಿಡುಗಡೆಯಾಗಿದ್ದು ಇದರಲ್ಲಿ ಹುಲಿ ಹೆಜ್ಜೆಯೊಂದಿಗೆ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಡುವ ದೃಶ್ಯವಿದೆ. ಇನ್ನು ಮಾರ್ಚ್ 23ರಂದು ರಾತ್ರಿ 8ಗಂಟೆಗೆ ಮ್ಯಾನ್ v/s ವೈಲ್ಡ್ ಕಾರ್ಯಕ್ರಮ ಪ್ರಸಾರ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ.

2019ರಲ್ಲಿ ಪ್ರಧಾನಿ ಮೋದಿ, ಕಾರ್ಯಕ್ರಮದ ನಿರೂಪಕ ಬೇರ್​ ಗ್ರಿಲ್ಸ್​ ಜತೆ ಕಾಡು ಸುತ್ತಿದ್ದ ಮ್ಯಾನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮ ಜನಪ್ರಿಯವಾಗಿತ್ತು. ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾದ ಕಾರ್ಯಕ್ರಮ  ಟಾಪ್​ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಈ ದಾಖಲೆಯನ್ನು ಕಂಡ ಡಿಸ್ಕವರಿ ಚಾನೆಲ್​, ಮೋದಿಯಂತೆ ಭಾರತದಲ್ಲಿ ಪ್ರಸಿದ್ಧತೆ ಪಡೆದುಕೊಂಡಿರುವ ವ್ಯಕ್ತಿಗಳ ಜತೆ ಕಾಡು ಸುತ್ತಿ ಕಾರ್ಯಕ್ರಮ ನಡೆಸುವ ತೀರ್ಮಾನ ತೆಗೆದುಕೊಂಡಿತ್ತು. ಅದರಂತೆ ಸೂಪರ್​ ಸ್ಟಾರ್​ ರಜನಿಕಾಂತ್​ ಜತೆ ಕಾರ್ಯಕ್ರಮದ ಚಿತ್ರೀಕರಣ ಮಾಡಲಾಗಿದೆ. ಮೈಸೂರಿನ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಂಡೀಪುರದಲ್ಲಿ ಮ್ಯಾನ್ v/s ವೈಲ್ಡ್‌ ನಿರೂಪಕ ಬೇರ್ ಗ್ರೀಲ್ಸ್ ಜೊತೆ ಕಾಡು ಸುತ್ತಿದ್ದು  ಕಾರ್ಯಕ್ರಮದಲ್ಲಿ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರದ ವನ್ಯಸಂಪತ್ತಿನ ಅನಾವರಣ ಮಾಡಲಾಗಿದೆ.

Key words: Man v / s Wild-Teaser -release –super star-Rajinikanth