ರೈತ ದಸರಾ, ಮಹಿಳಾ ದಸರಾದಂತೆ ಮಹಿಷ ದಸರಾ ಆಚರಣೆ: ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ

Promotion

ಮೈಸೂರು, ಅಕ್ಟೋಬರ್ 08, 2023 (www.justkannada.in): ಮೈಸೂರಿನಲ್ಲಿ ಮಹಿಷ ದಸರಾ ವರ್ಸಸ್ ದಸರಾ ವಿಚಾರ ಕುರಿತಂತೆ ಮೈಸೂರಿನಲ್ಲಿ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷ ದಸರಾ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಚಾಮುಂಡಿ ಬೆಟ್ಟವನ್ನ ಮಹಿಷ ಬೆಟ್ಟ ಅಂತಾ ಹಾಕಿರುವುದು ತಪ್ಪು. ಇದನ್ನ ಸರಿಪಡಿಸಲು ಸೂಚಿಸುತ್ತೇನೆ. ನಾವು ದಸರಾಗೆ ಪರ್ಯಾಯವಾಗಿ ಮಹಿಷ ದಸರಾ ಮಾಡುತ್ತಿಲ್ಲ. ಚಾಮುಂಡೇಶ್ವರಿಯನ್ನು ನೆನದು ನಾವು ಮಹಿಷ ದಸರಾ ಮಾಡುತ್ತೇವೆ. ಯಾರಿಗೂ ನೋವನ್ನುಂಟು ಮಾಡುವುದು ನಮ್ಮ ಉದ್ದೇಶವಲ್ಲ ಎಂದು ತಿಳಿಸಿದ್ದಾರೆ.

ರೈತ ದಸರಾ, ಮಹಿಳಾ ದಸರಾ ರೀತಿ ನಾವು ಮಹಿಷ ದಸರಾ ಮಾಡುತ್ತೇವೆ. ಇದನ್ನು 10 ದಿನಗಳ ಕಾಲ ಆಚರಿಸುವುದಿಲ್ಲ. ಹೀಗಾಗಿ ಮಹಿಷ ಮಹೋತ್ಸವ, ಮಹಿಷಾ ದಿನಾಚರಣೆ ಅಥವಾ ಮಹಿಷಾ ಸಮಾವೇಶ ಹೆಸರಿನಲ್ಲಿ ಇದನ್ನ ಆಚರಿಸುತ್ತೇವೆ. ಬೇರೆ ಸಮಯದಲ್ಲಿ ಆಚರಿಸಲು ಚಿಂತನೆ ನಡೆಸುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಸಂತೋಷ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ‌. ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡುತ್ತೇವೆ ಎಂದರು.

ಮಹಿಷ ದಸರಾಗೆ 50 ವರ್ಷ ಹಿನ್ನೆಲೆ ಸಮರ್ಥಿಸಿಕೊಂಡ ಉರಿಲಿಂಗ ಪೆದ್ದಿಮಠದ ಸ್ವಾಮೀಜಿ. ಮಂಟೇಲಿಂಗಯ್ಯ 1974 ರಲ್ಲೇ ಮಹಿಷನಿಗೆ ಪೂಜೆ ಸಲ್ಲಿಸಿ ಮಹಿಷ ದಸರಾ ಪ್ರಾರಂಭಿಸಿದ್ದರು. ಸರ್ಕಾರಕ್ಕೂ ಮಹಿಷ ದಸರೆಗೂ ಸಂಬಂಧವಿಲ್ಲ. ಇದನ್ನು ಸರ್ಕಾರಕ್ಕೆ ಟ್ಯಾಗ್ ಮಾಡಬೇಡಿ. ಇಂದು ಸಹಾ ನಾನು ಸಿಎಂ ಅವರನ್ನು ಬೇರೆ ವಿಚಾರಕ್ಕೆ ಭೇಟಿ ಮಾಡಿದ್ದೆ ಎಂದು ಮೈಸೂರಿನಲ್ಲಿ ಉರಿ ಲಿಂಗಪೆದ್ದಿಮಠದ ಸ್ವಾಮೀಜಿ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.