ಅತ್ತಿಬೆಲೆ ಪಟಾಕಿ ದುರಂತ: ಸ್ಫೋಟಕ ಕಾಯಿದೆಯಡಿ ಐವರ ವಿರುದ್ಧ ಪ್ರಕರಣ ದಾಖಲು

ಆನೇಕಲ್, ಅಕ್ಟೋಬರ್ 08, 2023 (www.justkannada.in): ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಐಪಿಸಿ ಸೆಕ್ಷನ್ 285,286,337,338,427,304 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅತ್ತಿಬೆಲೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣರಾದ ಆರೋಪಿ ಲೈಸೆನ್ನದಾರ ವಿ ರಾಮಸ್ವಾಮಿ ರೆಡ್ಡಿ, ಜಾಗದ ಮಾಲೀಕರಾದ ಜಯಮ್ಮ ಹಾಗೂ ಪುತ್ರ ಅನೀಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್, ಮಳಿಗೆ ನಡೆಸುತ್ತಿದ್ದ ರಾಮಸ್ವಾಮಿ ಪುತ್ರ ನವೀನ್ ರೆಡ್ಡಿ ವಿರುದ್ದ ದೂರು ದಾಖಲಿಸಿದ್ದಾರೆ. ಒಟ್ಟು ಐದು ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.

ದುರ್ಘಟನೆಯಲ್ಲಿ ಮೃತಪಟ್ಟವರ ವಿವರ

1.ಗಿರಿ ಬಿನ್ ವೇಡಿಯಪ್ಪನ್

  1. ಸಚೀನ್ ಬಿನ್ ಲೇಟ್ ವೇಡಿಯಪ್ಪನ್.

3.ವಿಜಯರಾಘವನ್.

  1. ವಿಳಂಬರತಿ ಬಿನ್ ಸೆಂದಿಲ್
  2. ಆಕಾಶ ಬಿನ್ ರಾಜಾ.

6.ವೆಡಿಯಪ್ಪನ್.

7.ಆದಿಕೇಶವ ಬಿನ್ ಪೆರಿಯಾಸ್ವಾಮಿ.

8.ಪ್ರಕಾಶ್ ಬಿನ್ ರಾಮು.

9.ವಸಂತರಾಜು ಬಿನ್ ಗೋವಿಂದ ರಾಜು.

10.ಅಬ್ಬಾಸ್ ಬಿಸ್ ಶಂಕರ್.

11.ಪ್ರಭಾಕರನ್ ಬಿನ್ ಗೋಪಿನಾಥ್.

12.ಲಿಕೀಶ್ ಬಿನ್ ಮೇಘನಾಥ್.

13.ಸಂತೋಷ್ ಬಿನ್ ಕುಮಾರ್

14.ವಿಳಾಸ ಪತ್ತೆ ಆಗಿಲ್ಲ.