ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆಯಂಥ ವ್ಯಕ್ತಿತ್ವ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಡಿಸೆಂಬರ್,23,2020(www.justkannada.in) : ಮಹಾತ್ಮ ಗಾಂಧೀಜಿ ಅವರದು ವಿಶ್ವದ ದಂತಕಥೆ ವ್ಯಕ್ತಿತ್ವವಾಗಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರ ಸೇರಿದಂತೆ ಆಧ್ಯಾತ್ಮಿಕತೆ, ದಾರ್ಶನಿಕತೆ ಈ ಎಲ್ಲ ಕ್ಷೇತ್ರಗಳ ಮೇಲೂ ಗಾಢ ಪ್ರಭಾವ ಬೀರಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashokಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಬುಧವಾರ ಆಯೋಜಿಸಿದ್ದ ‘’ಭಾರತದಲ್ಲಿ ಗಾಂಧಿ ಮತ್ತು ಅವರ ಸಮಕಾಲೀನರು’’ ವಿಷಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ್ ಗೆ ಚಾಲನೆ ನೀಡಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿದರು.

ವಿಶ್ವದಲ್ಲಿ ಗಾಂಧೀಜಿ ಅವರು ಬೀರಿರುವ ಪ್ರಭಾವ ಪ್ರೇರಣೆ ಅನನ್ಯವಾಗಿದೆ. ಅಪರೂಪದ ಒಳನೋಟದ ಚಿಂತನೆ ಅವರದ್ದಾಗಿತ್ತು. 20ನೇ ಶತಮಾನದಲ್ಲಿ ಅಹಿಂಸೆಯಂತಹ ಅಸ್ತ್ರ ಬಳಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಲ್ಲದೆ, ವಿಶ್ವದಲ್ಲಿ ಶಾಂತಿ ನೆಲೆಸಲು ಸೌಹಾರ್ದತೆ ನೆಲೆಸಲು ಅಹಿಂಸೆಯ ಅಸ್ತ್ರದ ಮೂಲಕ ವಿಶ್ವದ ಮನಗೆದ್ದಿದ್ದಾರೆ ಎಂದು ಸ್ಮರಿಸಿದರು.
ಪ್ರೀತಿಯೊಂದೆ ಮಾನವರೆಲ್ಲರನ್ನು ಕೂಡಿಸಬಲ್ಲದು ಎಂದು ತಿಳಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದು ಸರಳವಾಗಿ ಬದುಕಿ ವಿಶ್ವಕ್ಕೆ ಮಾದರಿಯಾದರು. ಇಂತಹ ಸರಳ ಬದುಕಿನ ಶ್ರೀಮಂತ ಚಿಂತನೆಯ ಧೀಮಂತ ವ್ಯಕ್ತಿತ್ವ ಗಾಂಧೀಜಿಯವರದ್ದಾಗಿದೆ ಎಂದರು.

ಮನುಷ್ಯತ್ವದ ದಾರಿಯಲ್ಲಿ ಗಾಂಧೀಜಿಯವರು ನಡೆಸಿದ ಪ್ರಯೋಗಗಳು, ಕಂಡುಕೊಂಡ ಸತ್ಯ ಮತ್ತು ಅಹಿಂಸಾ ಮಾರ್ಗ ಜಾಗತಿಕ ಇತಿಹಾಸದ ಉಜ್ವಲ ಮಾದರಿಗಳಾಗಿವೆ. ಈ ದೃಷ್ಟಿಯಿಂದ ಗಾಂಧೀಜಿಯವರ ಪ್ರಭಾವಕ್ಕೆ ಸಮಾಜದ ಎಲ್ಲ ಹಿನ್ನೆಲೆಯವರು ಒಳಗಾಗಿದ್ದಾರೆ. ಸಾಹಿತಿಗಳು, ರಾಜಕಾರಣಿಗಳು, ಸಮಾಜ ಸುಧಾರಕರು, ಹೋರಾಟಗಾರರು, ವಿಜ್ಞಾನಿಗಳು ಹಾಗೂ ಹಿರಿಕಿರಿಯ ವಯಸ್ಸಿನ ಎಲ್ಲ ತಲೆಮಾರಿನವರು ಸೇರಿದ್ದಾರೆ ಎಂದು ಹೇಳಿದರು.

ಗಾಂಧೀಜಿಯವರ ವಿಚಾರಧಾರೆಗಳನ್ನು ಇನ್ನಷ್ಟು ಅರಿಯುವ ಹಾಗೂ ಗಾಂಧೀಜಿಯವರ ವಿಚಾರಧಾರೆಗಳನ್ನು ಪಸರಿಸುವ ದೃಷ್ಟಿಯಿಂದ ಮೈಸೂರು ವಿವಿ ಗಾಂಧಿ ಭವನವು ಹಲವಾರು ವಿಚಾರಗೋಷ್ಠಿಗಳನ್ನು ವಿಶೇಷ ಉಪನ್ಯಾಸಗಳನ್ನು, ಸಂವಾದಗಳನ್ನು ಏರ್ಪಡಿಸುತ್ತ ಕ್ರಿಯಾಶೀಲವಾಗಿ ಕಾರ್ಯನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಎರಡು ದಿನದ ವೆಬಿನಾರ್ ನಲ್ಲಿ ಗಾಂಧೀಜಿಯವರ ಸಮಕಾಲೀನರು ಸಂವಿಧಾನ ಶಿಲ್ಪಿಗಳು ಆಗಿರುವ ಡಾ.ಬಿ.ಆರ್.ಅಂಬೇಡ್ಕರ್, ಪ್ರಸಿದ್ದ ಸಮಾಜವಾದಿ ಚಿಂತಕರಾಗಿದ್ದ ಡಾ.ರಾಮ್ ಮನೋಹರ ಲೋಹಿಯಾ, ಪಂಡಿತ್ ಜವಹಾರ್ ಲಾಲ್ ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ ಠಾಗೂರ್, ನಾರಾಯಣಗುರು, ಸಿ.ರಾಜಗೋಪಾಲಚಾರಿ(ರಾಜಾಜಿ), ಹರ್ಡೀಕರ್ ಮಂಜಪ್ಪ, ಸಿದ್ದನವಳ್ಳಿ ಕೃಷ್ಣಶರ್ಮ, ಕಸ್ತೂರಬಾ ಗಾಂಧಿ, ಸುಭಾಶ್ ಚಂದ್ರಬೋಸ್, ಮೌಲಾನ ಆಝಾದ್, ಮಹದೇವದೇಸಾಯಿ ಮುಂತಾದ ಗಾಂಧೀಜಿಯವರ ಒಡನಾಡಿಗಳನ್ನು ಕುರಿತು ಆಯೋಜಿಸಿರುವ ಎರಡು ದಿನದ ರಾಷ್ಟ್ರಮಟ್ಟದ ವೆಬಿನಾರ್ ಮಹತ್ವದ್ದಾಗಿದೆ ಎಂದರು.

ಎರಡು ದಿನದ ವೆಬಿನಾರ್ ನಲ್ಲಿ ದೆಹಲಿ, ಗುಜರಾತ್, ಆಂದ್ರಪ್ರದೇಶ, ಬೆಂಗಳೂರು ಮುಂತಾದ ಕಡೆಯಿಂದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಿಸಲಿದ್ದಾರೆ. ಜೆಎನ್ ಯು ದೆಹಲಿ, ಸೆಂಟರಲ್ ಯುನಿವರ್ಸಿಟಿ ಆಫ್ ಗುಜರಾತ್, ದೆಹಲಿ ವಿವಿಯ, ಐಐಟಿ ತಿರುಪತಿ, ಬೆಂಗಳೂರು ಮುಂತಾದ ಕಡೆಯಿಂದ ಪ್ರಸಿದ್ಧ ವಿದ್ವಾಂಸರುಗಳು ಭಾರತದಲ್ಲಿನ ಗಾಂಧಿ ಮತ್ತು ಅವರ ಸಮಕಾಲೀನರನ್ನು ಕುರಿತಂತೆ ತುಂಬ ಮೌಲಿಕವಾದ ಒಟ್ಟು 17 ವಿಷಯಗಳನ್ನು ಕುರಿತು ಪ್ರಬಂಧ ಮಂಡನೆಯಾಗಲಿವೆ ಎಂದು ತಿಳಿಸಿದರು.Mahatma,Gandhi's,legend,world,Chancellor,Mysore Vivi,Prof.G.Hemant Kumarಅತಿಥಿಯಾಗಿ ಆಗಮಿಸಿದ್ದ ಹಿರಿಯ ಗಾಂಧಿ ಮಾರ್ಗಿ ಕೆ.ಟಿ.ವೀರಪ್ಪ, ಪ್ರೊ.ಕಾಳಚೆನ್ನೇಗೌಡ, ದೇವನೂರು ಬಸವರಾಜು, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಎಂ.ಎಸ್.ಶೇಖರ್ ಇತರರು ಉಪಸ್ಥಿತರಿದ್ದರು.

english summary….

Mahatma Gandhiji is a world legend: MU VC Prof. G. Hemanth Kumar
Mysuru, Dec. 23, 2020 (www.justkannada.in): “Mahatma Gandhiji’s is a person who inspired the entire world, a world legend he is. He is the only person who made a strong influence on several sectors like social, political, economic, spiritual, he was a visionary,” opined Prof. G. Hemanth Kumar, Vice-Chancellor, University of Mysore.
He participated in a webinar on the topic “Gandhi and his contemporaries in India,” organised by the Gandhi Research Center, UoM, at Manasa Gantori Vignan Bhavan in Mysuru. “Influence of Gandhiji on the world is immense. He had very rare insights and a vision. He is the person who got us independence in the 20th Century through non-violence and satyagraha. He was the person who attracted the attention of the entire world through his non-violence concept and was a reason for world peace,” he said.Mahatma,Gandhi's,legend,world,Chancellor,Mysore Vivi,Prof.G.Hemant Kumar
The Gandhi Research Center has organised a two-day webinar that focuses on the vision and inspirations of Mahatma Gandhiji and his contemporaries including Dr. B. R. Ambedkar, Dr. Ram Manhoar Lohia, Pundit Jawaharlal Nehru, Sardar Vallabh Bhai Patel, Ravindranath Tagore, Narayanaguru, C. Rajagopalachari, Hardekar Manjapp among others.
Renowned speakers from Delhi, Gujarath, Andhra Pradesh, Bengaluru are participating in the webinar. About 17 papers will be presented by scholars.
K.T. Veerappa, Senior Gandhian was the chief guest. Prof. Kalachannegowda, Devanuru Basavaraju, M.S. Shekar, Director, Gandhi Research Center, and others participated.
Keywords: Gandhi and his contemporaries in India/ University of Mysore/ webinar

key words : Mahatma-Gandhi’s-legend-world-Chancellor-Mysore Vivi-Prof.G.Hemant Kumar