150ನೇ ಮಹಾತ್ಮ ಗಾಂಧಿ ಜಯಂತಿ ‌ಹಿನ್ನಲೆ: ವಿಶೇಷ ಮಾಫಿ ನೀಡಿ ಮೈಸೂರಿನ ಕಾರಾಗೃಹದ ಮೂವರು ಕೈದಿಗಳ ಬಿಡುಗಡೆ….

ಮೈಸೂರು,ನ,5,2019(www.justkannada.in) ಮಹಾತ್ಮ ಗಾಂಧಿಯವರ 150 ನೇ ಜಯಂತಿ ‌ಹಿನ್ನಲೆ ಮೈಸೂರಿನ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳನ್ನ ವಿಶೇಷ ಮಾಫಿ ನೀಡಿ ಬಿಡುಗಡೆ‌ ಮಾಡಲಾಗಿದೆ.

ಮಲ್ಲಿಕಾರ್ಜುನ, ಸತೀಶ, ರಮೇಶ ಬಿಡುಗಡೆಯಾದ ಶಿಕ್ಷಾ ಬಂದಿಗಳು. ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶೇಕಡಾ 66 ರಷ್ಟು‌ ಶಿಕ್ಷೆ ಪೂರೈಸಿದ 3 ಮಂದಿ ಶಿಕ್ಷಾ ಬಂದಿಗಳನ್ನ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ನ್ಯಾಯಾಧೀಶ ವಂಟಿಗೋಡಿ, ಬಿ ಪಿ.ದೇವಮಾನೆ, ನಿವೃತ್ತ ಪ್ರಾಧ್ಯಾಪಕಿ ಮೀನಾ ದೇಶಪಾಂಡೆ, ಉಪ ಪೊಲೀಸ್ ಆಯುಕ್ತರಾದ ಕವಿತಾ, ನಂಜರಾಜ್ ಅರಸು ಮುಂತಾದವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಂದಿಖಾನೆ‌ ಸಲಹಾ ಸಮಿತಿಯ ಸದಸ್ಯ ನಂಜರಾಜ್ ಅರಸು,  ಖೈದಿಗಳಿಗೆ ಬಿಡುಗಡೆ ಸಮಯದಲ್ಲಿ ವಿಶೇಷ ಸೌಲಭ್ಯ ನೀಡಬೇಕು. ಜೈಲಿನಲ್ಲಿ ಅವರ ದುಡಿಮೆಗೆ ನೀಡುವ ಸಂಬಳದಲ್ಲಿ ಕಡಿತ ಮಾಡಿ ಅದನ್ನ ಪಿಎಫ್ ಫಂಡ್ ರೀತಿ ನೀಡಬೇಕು. ಶಿಕ್ಷೆ ಮುಗಿಸಿ ಹೊರ ಹೋಗುವಾಗ ಪಿಎಫ್ ಫಂಡಿನಲ್ಲಿ ದಂಡ ಸರಿದೂಗಿಸಿಕೊಳ್ಳಬೇಕು. ಸರ್ಕಾರಗಳು ಬಿಡುಗಡೆಯಾದ ಬಂದಿಗಳಿಗೆ ಸಾಲ ಸೌಲಭ್ಯಗಳನ್ನ ಒದಗಿಸಬೇಕು. ಬ್ಯಾಂಕುಗಳು ಅವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ಹೀಗಾಗಿ ಸರ್ಕಾರಗಳು ಅವರಿಗೆ ಸಾಲ ಕೊಡಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಹಾಗೆಯೇ ನಾವು ಇವರ ಪರ ಸದಾ‌ ಇರುತ್ತೇವೆ. ಶಾಸಕ ತನ್ವೀರ್ ಸೇಠ್ ಇದರ ಬಗ್ಗೆ ಗಮನ ಹರಿಸಬೇಕು. ಇನ್ನೂ ಆರು ತಿಂಗಳಲ್ಲಿ ಇವರಿಗೆ ಸೌಲಭ್ಯ ಒದಗಿಸಬೇಕು ಎಂದು ನಟರಾಜ ಅರಸು ಒತ್ತಾಯಿಸಿದರು.

Key words: Mahatma Gandhiji Jayanti – Three Prisoners- Release – Mysore