ಮಹಾಶಿವರಾತ್ರಿ : ಸಿಎಂ ಬಿ.ಎಸ್.ವೈ ಹಾಗೂ ಗಣ್ಯರಿಂದ ಶುಭಾಶಯ

Promotion

ಬೆಂಗಳೂರು,ಮಾರ್ಚ್,11,2021(www.justkannada.in) :  ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ ಸಮಸ್ತರಿಗೂ ಆ ಪರಮೇಶ್ವರನು ಮಂಗಳವನ್ನು, ಆರೋಗ್ಯವನ್ನು ಮತ್ತು ಸುಖವನ್ನು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಹಾಶಿವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ.

jkನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ, ವಿಶ್ವದ ಸಕಲವೂ ಆಗಿರುವ ಶಿವನ ಆರಾಧನೆಯ ದಿನವಾದ ಈ ದಿನ ಎಲ್ಲರಿಗೂ ಶುಭಾಶಯ ಕೋರುತ್ತೇನೆ. ವಿಶ್ವದ ಹಿತಕ್ಕಾಗಿ ನಂಜನ್ನೇ ಉಂಡ ನಂಜುಂಡನ ಆಶಿರ್ವಾದ ಎಲ್ಲರಿಗೂ ಸಿಗಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ. ಮಂಗಳಕರವಾದ ಮಹಾ ಶಿವರಾತ್ರಿಯು ಜನರ ಸಂಕಷ್ಟಗಳನ್ನು ಕಳೆದು ಕಲ್ಯಾಣವನ್ನುಂಟು ಮಾಡಲಿ. ಕಲ್ಯಾಣವೆಂಬುದು ಬಸವನಿಳೆಯ ಬೆಳೆಯಾಗಲಿ. ನಾಡ ಬಾಂಧವರಿಗೆ ಮಹಾ ಶಿವರಾತ್ರಿಯ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.

key words :  Mahashivaratri-CM B.S.Y-elite-Greetings