ಸಂಘರ್ಷದ ಬದಲು ಸಂಬಂಧ ಗಟ್ಟಿಯಾಗಬೇಕು: ಯಾವುದೇ ಪ್ರಚೋದನಕಾರಿ ಕೆಲಸ ಮಾಡಬೇಡಿ- ಸಿ.ಟಿ ರವಿ.

BL Santosh - selection -candidates - Rajya Sabha-minister-CT Ravi.
Promotion

ಬೆಂಗಳೂರು,ಡಿಸೆಂಬರ್,7,2022(www.justkannada.in): ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ, ಎರಡು ರಾಜ್ಯಗಳ ನಡುವೆ ಸಂಘರ್ಷದ ಬದಲು ಸಂಬಂಧ ಗಟ್ಟಿಯಾಗಬೇಕು. ಯಾವುದೇ ಪ್ರಚೋದನಕಾರಿ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ,  ದೇವೆಂದ್ರ ಫಡ್ನಾವೀಸ್ ಮತ್ತು  ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯಾಗಿದೆ . ಸಂಘರ್ಷದ ಬದಲು ಸಂಬಂಧ ಗಟ್ಟಿಯಾಗಬೇಕು.  ಸೌಹಾರ್ದತೆ ಕಾಪಾಡಬೇಕಾಗಿದ್ದು ನಮ್ಮ ಜವಾಬ್ದಾರಿ. ಯಾವುದೇ ಪ್ರಚೋಧನಕಾರಿ ಕೆಲಸ ಮಾಡಬಾರದು.BL Santosh - selection -candidates - Rajya Sabha-minister-CT Ravi.

ವಾಹನಗಳಿಗೆ ಮಸಿ ಬಳಿಯೋ ಕೆಲಸ ಮಾಡಬೇಡಿ. ವಾಹನ ಕರ್ನಾಟಕ ಅಥವಾ ಮಹಾರಾಷ್ಟ್ರ ಯಾವುದೇ ಆಗಲಿ,  ವಾಹನಗಳಿಗೆ ಮಸಿ ಬಳಿದರೇ ಪ್ರಚೋದನೆಯಾಗುತ್ತೆ ಎರಡು ರಾಜ್ಯಗಳೂ ಸೌಹಾರ್ದತೆ ಕಾಪಾಡಬೇಕು. ಗಡಿ ವಿವಾದ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ನುಡಿದರು.

Key words: maharastra-karnataka- border-dispute- CT Ravi