ಅಕ್ಕಲಕೋಟೆ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ: ಹಾಗಂತ ವಶಪಡಿಸಿಕೊಂಡ್ರೆ ಮೂರ್ಖತನವಾಗುತ್ತೆ- ಸಚಿವ ಸಿ.ಟಿ ರವಿ ಟಾಂಗ್…

Promotion

ಬೆಂಗಳೂರು,ಡಿ,30,2019(www.justkannada.in):  ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರಕ್ಕೆ ಟಾಂಗ್ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅಕ್ಕಲಕೋಟೆ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ.  ಹಾಗಂತ ವಶಪಡಿಸಿಕೊಂಡ್ರೆ ಮೂರ್ಖತನವಾಗುತ್ತೆ ಎಂದು  ಹೇಳಿದ್ದಾರೆ.

ಮಹಾರಾಷ್ಟ್ರ ಗಡಿ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಪ್ರಧಾನಿ ಮೋದಿ ಅಖಂಡ ಭಾರತ ನಿರ್ಮಿಸಲು  ಯತ್ನಿಸುತ್ತಿದ್ದಾರೆ. ಆದರೆ ನೆರೆ ರಾಜ್ಯಗಳೂ ಭಾಷೆ ಆಧಾರದಲ್ಲಿ ವಿಭಜಿಸುತ್ತಿವೆ. ಇದು ಸರಿಯಲ್ಲ.  ಅಕ್ಕಲಕೋಟೆ, ಸಾಂಗ್ಲಿ ಜಿಲ್ಲೆ ಸೇರಿ ಹಲವೆಡೆ ಕನ್ನಡಿಗರು ಹೆಚ್ಚಿದ್ದಾರೆ. ಆಗಂತ ಅವುಗಳನ್ನ ವಶಪಡಿಸಿಕೊಂಡ್ರೆ ಅದು ಮೂರ್ಖತನವಾಗುತ್ತದೆ ಎಂದು ಕಿಡಿಕಾರಿದರು.

ಇನ್ನು ಕನಕಪುರದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ನಮಗೆ ಶ್ರೀ ಕೃಷ್ಣನೂ ಒಂದೇ ಏಸುಕ್ರಿಸ್ತನೂ ಒಂದೇ. ಗೋಮಾಳ ಭೂಮಿ ದುರುಪಯೋಗದ ಬಗ್ಗೆ ತನಿಖೆಗೆ ಕಂದಾಯ ಸಚಿವರು ಆದೇಶ ನೀಡಿದ್ದಾರೆ. ಹೀಗಾಗಿ ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Key words: maharastra –border- dispute- Minister CT Ravi-Tong