ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: 8ನೇ ಆರೋಪಿ ಬಂಧನ…

ಮೈಸೂರು,ಡಿ,30,2019(www.justkannada.in):  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8ನೇ ಆರೋಪಿಯನ್ನು ಬಂಧಿಸಿದ್ದಾರೆ.

ಗೌಸಿಯಾ ನಗರದ ಮತೀನ್ ಬೇಗ್(45) ಬಂಧಿತ ಆರೋಪಿ. ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಸಹಕರಿಸಿದ್ದ ಆರೋಪದಲ್ಲಿ ಮತೀನ್ ಬೇಗ್ ಬಂಧಿಸಲಾಗಿದೆ. ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ್ದ ಆರೋಪಿ ಫರಾನ್ ಪಾಷನನ್ನು ಘಟನೆ ನಡೆದ ಕ್ಷಣದಲ್ಲೆ ಸ್ಥಳೀಯರ ಸಹಕಾರದಿಂದ ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಯನ್ನು ವಿಚಾರಣೆ ನಡೆಸಿ ಆರೋಪಿಗೆ ಸಹಕರಿಸಿದ 6 ಮಂದಿಯನ್ನ ಬಂಧಿಸಲಾಗಿತ್ತು.

ಇದೀಗ. ಈ ಮೂಲಕ ಬಂಧಿತರ ಸಂಖ್ಯೆ 8ಕ್ಕೇರಿದೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ರಚಿಸಿರುವ ತನಿಖಾ ತಂಡದಿಂದ ಆರೋಪಿ ಬಂಧನವಾಗಿದ್ದು, ಪ್ರಕರಣದ ವಿಚಾರಣೆ ಬಿರುಸಾಗಿ ಸಾಗಿದ್ದು, ಇನ್ನೂ ಹಲವರ ಬಂಧನ ಸಾಧ್ಯತೆ ಹೆಚ್ಚಿದೆ.

ಶಾಸಕ ತನ್ವೀರ್ ಸೇಠ್  ತಮ್ಮ ಸಂಬಂಧಿಯ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೇ ಆರೋಪಿ ಫರಾನ್(24)  ಶಾಸಕ ತನ್ವೀರ್ ಸೇಠ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದನು.  ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎನ್ ಆರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

Key words: Congress MLA -Tanvir Seth –assult- case –  Arrest – 8th accused.