Promotion
ಮಡಿಕೇರಿ,ನವೆಂಬರ್,26,2020(www.justkannada.in): 105 ಶಾಸಕರು ಇದ್ದುದ್ದರಿಂದ ಬಿಜೆಪಿ ಸರ್ಕಾರ ರಚನೆಯಾಯಿತು ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಗುರುವಾರ ಮಾತನಾಡಿದ ಹೆಚ್.ವಿಶ್ವನಾಥ್, ಎಲ್ಲರೂ ಇದ್ದುದ್ದರಿಂದ ಸರ್ಕಾರ ರಚನೆಯಾಗಿದೆ. ಯಾರೋ ಕೆಲವರಿಂದ ಸರ್ಕಾರ ರಚನೆಯಾಗಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಚಿವ ಸಂಪುಟ ವಿಸ್ತರಣೆಗೆ ಆತುರ ಇಲ್ಲ. ಆದರೆ ಅನ್ಯಾಯವಾಗದಂತೆ ಅವಕಾಶ ನೀಡಬೇಕು. ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: madikeri-MLC- H. Vishwanath – statement –MLA-MP Renukacharya