ಬಿಸಿಲು ಅಂತಾ ಕುಲ್ಫಿ ತಿನ್ನುವ ಮುನ್ನ ಎಚ್ಚರ: ಕುಲ್ಫಿಯಲ್ಲಿ ಪತ್ತೆಯಾಯ್ತು ಬ್ಲೇಡ್….

ಕೊಡಗು,ಫೆ,15,2020(www.justkannada.in):  ಬೇಸಿಗೆಯ ಸಮಯದಲ್ಲಿ, ಹೆಚ್ಚು ಬಿಸಿಲು ಇದ್ದಾಗ  ಬಾಯಾರಿಕೆ, ದಾಹ ತಣಿಸಿಕೊಳ್ಳಲು  ಎಲ್ಲರೂ ಐಸ್ ಕ್ರೀಮ್, ಕುಲ್ಫಿ ಮೊರೆಹೋಗುವುದು ಸಾಮಾನ್ಯ. ಈ ನಡುವೆ  ಕುಲ್ಫಿ ತಿನ್ನುವ ವೇಳೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿರುವ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ಈ  ಘಟನೆ ನಡೆದಿದೆ. ರಮ್ಯ ಎಂಬುವವರು ಕುಲ್ಫಿಯನ್ನ ಖರೀದಿ ಮಾಡಿ ತಿನ್ನುವ ವೇಳೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿದೆ. ತಿನ್ನುವ ವೇಳೆ ನಾಲಿಗೆಗೆ ಗೀಚಿದ ಪರಿಣಾಮ ಮಹಿಳೆ ಎಚ್ಚೆತ್ತುಕೊಂಡ ಪರಿಣಾಮ ದುರಂತ ತಪ್ಪಿದೆ.

ಈ ಕುಲ್ಫಿ ಐಸ್ ಕ್ರೀಂ  ನಾಪೋಕ್ಲುವಿನ ಅಶ್ರಫ್ ತಿಂಡಿ ತಯಾರಿಕೆ ಘಟಕದಲ್ಲಿ ತಯಾರಾಗಿದ್ದು, ಕುಲ್ಫಿ ತಯಾರಿಸುವ ವೇಳೆ  ಅಲ್ಲಿನ ತಯಾರಕರು ಬೇಜವಬ್ದಾರಿತನ ಮೆರೆದಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದಿದ್ದು ಇನ್ನು ಕುಲ್ಫಿ, ಐಸ್ ಕ್ರೀಂ  ತಿನ್ನುವ ಮೊದಲು ಎಲ್ಲರೂ ಎಚ್ಚರವಹಿಸಬೇಕಿದೆ.

Key words: madikeri- Be careful- before- eating -kulfi.