ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ: ಜೋತಿರಾದಿತ್ಯ ಸಿಂಧಿಯಾಗೆ ಹೆಚ್1 ಎನ್1 ಬಂದಿದೆ ಎಂದು ಕಿಡಿಕಾರಿದ ‘ಕೈ’ ನಾಯಕ ದಿಗ್ವಿಜಯ್ ಸಿಂಗ್

Promotion

ನವದೆಹಲಿ,ಮಾ,10,2020(www.justkannada.in): ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾವೇ ನಡೆಯುತ್ತಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಂಡೆದಿದ್ದಿರುವ ಕೈ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ.

 ಸೋಮವಾರ ರಾತ್ರಿ ಮಧ್ಯಪ್ರದೇಶದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಕಮಲನಾಥ್ ವಿರುದ್ಧ ಅಸಮಾಧಗೊಂಡು ಬಂಡಾಯವೆದ್ದಿರುವ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು  ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ‘ಕಾಂಗ್ರೆಸ್ ಹೈಕಮಾಂಡ್ ನಾಯಕರು ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ, ಅವರಿಗೆ ಹೆಚ್1 ಎನ್1 ಬಂದಿದೆ ಹೀಗಾಗಿ ಅವರನ್ನ ಸಂಪರ್ಕಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Key words:  Madhya Pradesh -Political –Hydrama- H1N1 – Jyotiraditya sindya-congress leader- digwijay singh