ಮಾಡಾಳ್ ವಿರೂಪಾಕ್ಷಪ್ಪಗೆ ಬೇಲ್ ಕೊಡಿಸುವಲ್ಲಿ ಸರ್ಕಾರವೇ ಶಾಮೀಲು -ರಾಮಲಿಂಗರೆಡ್ಡಿ ಆರೋಪ.

Promotion

ಬೆಂಗಳೂರು,ಮಾರ್ಚ್,8,2023(www.justkannada.in): ಲೋಕಾಯುಕ್ತ ದಾಳಿ ವೇಳೆ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಒಂದೇ ದಿನಕ್ಕೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಸಚಿವ ರಾಮಲಿಂಗರೆಡ್ಡಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ರಾಮಲಿಂಗರೆಡ್ಡಿ, ಸರ್ಕಾರದ ಸಹಾಯವಿಲ್ಲದೆ ಮಾಡಾಳ್  ವಿರೂಪಾಕ್ಷಪ್ಪಗೆ ಹೇಗೆ ಬೇಲ್ ಸಿಗುತ್ತೆ..? ಮಾಡಾಳ್ ವಿರೂಪಾಕ್ಷಪ್ಪಗೆ ಬೇಲ್ ಕೊಡಿಸುವಲ್ಲಿ ಸರ್ಕಾರ ಶಾಮೀಲಾಗಿದೆ ಎಂದು ಆರೋಪಿಸಿದರು.

ವಿಪಕ್ಷದವರು ಬೇಲ್ ಬೇಕೆಂದರೇ ತಿಂಗಳುಗಟ್ಟಲೇ ಅಲೆಯಬೇಕು. ಆದರೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ   ಮೊದಲ ದಿನದ ವಿಚಾರಣೆಯಲ್ಲೇ ಬೇಲ್ ಸಿಕ್ಕಿದೆ. ಸರ್ಕಾರ ಈ ವಿಚಾರದಲ್ಲಿ ಶಾಮೀಲಾಗಿದೆ ಎಂದರು.

Key words: Madal Virupakshappa – bail- government – involved- Ramalingareddy