“ಕಡಿಮೆ-ವೆಚ್ಚದ ಜಿಯೋಸ್ಪೇಷಿಯಲ್ ತಂತ್ರಜ್ಞಾನ ಅಳವಡಿಕೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಕಾರಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆಬ್ರವರಿ,05,2021(www.justkannada.in) : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಡಿಮೆ-ವೆಚ್ಚದ ಜಿಯೋಸ್ಪೇಷಿಯಲ್ ತಂತ್ರಜ್ಞಾನ ಅಳವಡಿಕೆಯು ಸುಸ್ಥಿರ ಭೂ ಆಡಳಿತ ವ್ಯವಸ್ಥೆಗಳತ್ತ ಸಾಗುವುದಕ್ಕೆ ನೆರವಾಗುತ್ತದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ತ್ವರಿತ ಪ್ರಗತಿಗೆ ಇದು ಸಹಕಾರಿಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮರ್ ಹೇಳಿದರು.Low-cost-Geospatial-Technology-Adaptation-Developing-nations-Collaborative-Chancellor-Prof.G.Hemant Kumar

ಮೈಸೂರು ವಿಶ್ವವಿದ್ಯಾಲಯ ಮತ್ತು ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟ(ಐಯುಜಿ)ದ ವತಿಯಿಂದ “ಸುಸ್ಥಿರ ಅಭಿವೃದ್ಧಿಗೆ ಜಿಯೋಸ್ಪೇಷಿಯಲ್ ತಂತ್ರಜ್ಞಾನ” ವಿಷಯ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ ವರ್ಚುವಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಯೋಸ್ಪೇಷಿಯಲ್ ತಂತ್ರಜ್ಞಾನವು ಮಾಹಿತಿ ಮತ್ತು ವೈಜ್ಞಾನಿಕ ವಿಚಾರದಲ್ಲಿ ಪ್ರಮುಖವಾಗಿ ಗುರತಿಸಿಕೊಂಡಿದೆ. ಈ ತಂತ್ರಜ್ಞಾನವು ಯಾವುದೇ ನಿರ್ದಿಷ್ಟ ಪ್ರದೇಶ ಅಥವಾ ಸಮಯಕ್ಕೆ ಸೀಮಿತವಾಗಿಲ್ಲ. ಇದರ ಉಪಯುಕ್ತತೆಯು ಜಾಗತಿಕದಿಂದ ಸ್ಥಳೀಯ ಮತ್ತು ವೈಯಕ್ತಿಕ ಮಟ್ಟದವರೆಗೂ ವಿಶಾಲವಾಗಿದೆ ಎಂದರು.Low-cost-Geospatial-Technology-Adaptation-Developing-nations-Collaborative-Chancellor-Prof.G.Hemant Kumar

ಜಿಯೋಸ್ಪೇಷಿಯಲ್ ತಂತ್ರಜ್ಞಾನವು ಬಹುಶಿಸ್ತೀಯ ಕ್ಷೇತ್ರ ಹಾಗೂ ಹೊಸ ಸಂಯೋಜಿತ ಶೈಕ್ಷಣಿಕ ವಿಭಾಗವಾಗಿರುವುದರಿಂದ ಇದನ್ನು ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಅಪ್ಲಿಕೇಶನ್ ಮಟ್ಟದಲ್ಲಿ ಬಳಸಲಾಗುತ್ತದೆ. ಹೀಗಾಗಿಯೂ, ಅಭಿವೃದ್ಧಿಯಲ್ಲಿ ಈ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಂಡು ಯೋಜನೆಗಳ ನಿರ್ಧಾರಕ್ಕೆ ಎಲ್ಲಾ ದೇಶಗಳಲ್ಲೂ ಅಭಿವೃದ್ಧಿ, ಯೋಜನೆ ಮತ್ತು ಮೇಲ್ವಿಚಾರಣೆಯ ಪ್ರಮುಖ ಸಾಧನವಾಗಿ ಇದನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ಪ್ರಮುಖವಾಗಿ ಈ ತಂತ್ರಜ್ಞಾನವು ಸುಸ್ಥಿರ ನಗರ-ಪ್ರಾದೇಶಿಕ ಅಭಿವೃದ್ಧಿ, ಆಹಾರ ಮತ್ತು ನೀರಿನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ, ಆಶ್ರಯ ಮತ್ತು ಸಾಮಾಜಿಕ ಸೇವೆಗಳು ಮತ್ತು ನೈಸರ್ಗಿಕ ಅಪಾಯಗಳು ಸೇರಿದಂತೆ ಹಲವಾರು ಅಭಿವೃದ್ಧಿ ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಹಿತಿ ನೀಡಿದರು.

ಈ ತಂತ್ರಜ್ಞಾನದ ದತ್ತಾಂಶವು ಪಕ್ಷಪಾತವಿಲ್ಲದ, ವಿಶ್ವಾಸಾರ್ಹವಾಗಿದೆ. ಸಾರ್ವಜನಿಕ ಆರೋಗ್ಯದಿಂದ ರಿಯಲ್ ಎಸ್ಟೇಟ್ ವರೆಗೆ ಯಾವುದೇ ವೃತ್ತಿಗೂ ಈ ತಂತ್ರಜ್ಞಾನ ಅನ್ವಯಿಸಬಹುದು. ಪ್ರಸ್ತುತ ಇಡೀ ಜಗತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ರಚನೆಯ ಮೇಲೆ ಬೆಳೆಯುತ್ತಿದೆ. ಪಾರದರ್ಶಕ ಮತ್ತು ಸಕಾಲಿಕ ನಿರ್ಧಾರಗಳ ಮೂಲಕ ಅಂತರ್ಗತ ಬೆಳವಣಿಗೆಗಾಗಿ ಜಿಯೋಸ್ಪೇಷಿಯಲ್ ಮಾಹಿತಿ, ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳು (ಜಿಡಿಪಿಎಸ್ಎಸ್) ಪರಿಣಾಮಕಾರಿ ಬಳಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

“ಶಿಕ್ಷಣ ವ್ಯವಸ್ಥೆಯಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನ ಪರಿಚಯಿಸುವ ಅಗತ್ಯವಿದೆ”

ಜಿಯೋಸ್ಪೇಷಿಯಲ್ ಡೇಟಾ, ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳು (ಜಿಡಿಪಿಎಸ್ಎಸ್ಎಸ್) ಕುರಿತಂತೆ ವಿವಿಯಲ್ಲಿ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯನ್ನು ಬಲಪಡಿಸಲು ನ್ಯಾಷನಲ್ ಜಿಯೋಸ್ಪೇಷಿಯಲ್ ಯೂನಿವರ್ಸಿಟಿ ಅನ್ನು ಸೆಟಪ್ ಮಾಡಲು ಪ್ರಸ್ತಾಪಿಸಲಾಗಿದೆ. ಈ ತಂತ್ರಜ್ಞಾನದ ವಿಶಾಲವಾದ ತಿಳುವಳಿಕೆ ಮತ್ತು ಸ್ವೀಕಾರವನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ವಿವಿಧ ಹಂತಗಳಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

ಈ ತತಂತ್ರಜ್ಞಾನವು ವಿಪತ್ತು ಪರಿಹಾರ, ಪುನರ್ ನಿರ್ಮಾಣ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನಗಳು, ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರನ್ನು ಸಜ್ಜುಗೊಳಿಸಲು ಹೇಗೆ ಅನುವು ಮಾಡಿಕೊಡಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದರು.   Low-cost-Geospatial-Technology-Adaptation-Developing-nations-Collaborative-Chancellor-Prof.G.Hemant Kumar

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮಾತನಾಡಿ, ಜಿಯೋಸ್ಪೇಷಿಯಲ್ ತಂತ್ರಜ್ಞಾನವು ಸರಕಾರಿ ಮತ್ತು ಖಾಸಗಿ ಕಾರ್ಯಗಳಿಗೂ ಸಹಕಾರಿಯಾಗಿದೆ. ಬಡತನ, ಹಸಿವು,ನಗರೀಕರಣ, ಪರಿಸರದ ಬದಲಾವಣೆಗೆ, ಆರ್ಥಿಕ, ಸಾಮಾಜಿಕ ಅಸಮಾನತೆ…ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೂ ಸಹಾಯಮಾಡಲಿದೆ ಎಂದು ತಿಳಿಸಿದರು.

ಐಯುಜಿ ಪ್ರಧಾನ ಕಾರ‍್ಯದರ್ಶಿ ಪ್ರೊ.ಆರ್‌.ಬಿ.ಸಿಂಗ್‌, ಮೈಸೂರು ವಿವಿ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಚಂದ್ರಶೇಖರ್ ಸೇರಿದಂತೆ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

ENGLISH SUMMARY…

Adoption of low-cost geospatial technology helpful for developing nations: MoU VC
Mysuru, Feb. 05, 2021 (www.justkannada.in): “Adoption of low-cost geospatial technology will help developing countries to move towards sustainable geo-management systems. It will be helpful for swift progress in this era of technology,” opined Prof. G. Hemanth Kumar, Vice-Chancellor, University of Mysore.Low-cost-Geospatial-Technology-Adaptation-Developing-nations-Collaborative-Chancellor-Prof.G.Hemant Kumar
He inaugurated the International virtual seminar on the topic “Geospatial Technology for Sustainable Development,” organised by the University of Mysore, in association with the International Geographical Union (IGU).
In his address, he explained, “Geospatial technology is a multi-disciplinary field and as it is a new coordinated educational division, it is being used at the application level more in the developed nations. Also because of this, it is being used as an important development, planning and monitoring tool in all the countries to decide on the projects, by knowing the significance of this technology in development”
Prof. R.B. Singh, General Secretary, IGU, Dr. B.Chandrashekar, HoD, Geography Division, University of Mysore, and other staff members of the division were present.
Keywords: Geospatial Technology/ Seminar/ University of Mysore/ Geography Department

key words : Low-cost-Geospatial-Technology-Adaptation-Developing-nations-Collaborative-Chancellor-Prof.G.Hemant Kumar