ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಪ್ರಿಯಕರ….

Promotion

ಕೊಪ್ಪಳ,ಮಾರ್ಚ್,12,2021(www.justkannada.in):  ಪ್ರೀತಿಸಿ ಮದುವೆಯಾಗುವುದಾಗಿ  ನಂಬಿಸಿ ಯುವತಿಗೆ ಪ್ರಿಯಕರ ಕೈಕೊಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.jk

ಕಾರಟಗಿ ತಾಲೂಕಿನ ನಿವಾಸಿಯಾಗಿರುವ ವಿರೂಪಾಕ್ಷ ಎಂಬುವವನೇ ಯುವತಿಗೆ ಪ್ರೀತಿಸಿ ಮದುವೆ ಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ.  ಯುವತಿ ಹಾಗೂ ವಿರುಪಾಕ್ಷ 4 ವರ್ಷಗಳಿಂದಲೂ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ ವಿರೂಪಾಕ್ಷ ಯುವತಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ.

ಪ್ರಿಯಕರ ವಿರುಪಾಕ್ಷನ ವಿರುದ್ಧ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪವೂ ಕೇಳಿ ಬಂದಿದೆ.  ಬಳಿಕ ಯುವತಿ ಜೊತೆಗೆ ಮದುವೆಯಾಗಲು ವಿರುಪಾಕ್ಷ ನಿರಾಕರಿಸಿದ್ದು, ಬೇರೆ ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದನು ಎನ್ನಲಾಗಿದೆ.

love-woman-believed-fraud-koppal
ಕೃಪೆ-internet

ಇನ್ನು ನ್ಯಾಯಕ್ಕಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಕುರಿತು ಗಂಗಾವತಿ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: love – woman –believed – Fraud-koppal