ಲವ್ ಮಾಕ್‍ಟೇಲ್ ತೆಲಗಿಗೆ ಡಬ್, ಕನ್ನಡ ನಿರ್ದೇಶಕರಿಂದಲೇ ಡೈರೆಕ್ಷನ್ !

Promotion

ಬೆಂಗಳೂರು, ಜೂನ್ 09, 2020 (www.justkannada.in): ಲವ್ ಮಾಕ್‍ಟೇಲ್ ಚಿತ್ರದ ಕುರಿತಂತೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಕನ್ನಡಿಗರನ್ನು ರಂಜಿಸಿದ್ದ ಲವ್ ಮಾಕ್‍ಟೇಲ್ ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.
ಈಗಾಗಲೇ ತೆಲುಗು ವರ್ಷನ್‍ನ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಕನ್ನಡದ ನಿರ್ದೇಶಕರೇ ಆಕ್ಷನ್ ಕಟ್ ಹೇಳುತ್ತಿರುವುದು ಮತ್ತೊಂದು ವಿಶೇಷ. ತೆಲುಗು ನಿರ್ಮಾಪಕ ಶ್ರೀಧರ ರೆಡ್ಡಿ ನಾಗಶೇಖರ್ ಅವರಿಗೆ ಸಾಥ್ ನೀಡಿದ್ದಾರೆ.
ಹೌದು. ಸಂಚಲನವನ್ನೇ ಸೃಷ್ಟಿ ಮಾಡಿದ ಲವ್ ಮಾಕ್‍ಟೇಲï ಚಿತ್ರ ತೆಲುಗಲ್ಲಿ ರೀಮೇಕ್ ಆಗುತ್ತಿದ್ದು, ಇದೀಗ ಚಿತ್ರದ ಟೈಟಲ್ ರಿಲೀಸ್ ಆಗಿದೆ. ಕನ್ನಡದಲ್ಲಿ ಜನಮನ ಗೆದ್ದ ಲವ್ ಮಾಕ್‍ಟೇಲ್ ಚಿತ್ರಕ್ಕೆ ಪರಭಾಷೆಯ ರಿಮೇಕ್ ರೈಟ್ಸಗೆ ಎಲ್ಲಾ ಕಡೆ ಬೇಡಿಕೆ ಬಂದಿತ್ತು.