ಫೆ.26ರಿಂದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 69ನೇ ವಾರ್ಷಿಕ ಆರಾಧನಾ ಮಹೋತ್ಸವ.

Promotion

ದಾವಣಗೆರೆ,ಫೆಬ್ರವರಿ,7,2022(www.justkannada.in):  ಹರಿಹರ ತಾಲೂಕು ಮಲೆಬೆನ್ನೂರು ಸಮೀಪದ ಕೊಮಾರನಹಳ್ಳಿಯ ರಂಗನಾಥಾಶ್ರಮದಲ್ಲಿ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 69ನೇ ವಾರ್ಷಿಕ ಆರಾಧನಾ ಮಹೋತ್ಸವ ಫೆಬ್ರವರಿ 26ರಿಂದ ಮಾರ್ಚ್ 5ರವರೆಗೆ ನಡೆಯಲಿದೆ.

ಎಂಟು ದಿನವೂ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಪ್ರತಿ ದಿನ ಬೆಳಗ್ಗೆ 7.30ರಿಂದ ಗುರುಚರಿತ್ರೆ ಪಾರಾಯಣ, ಸಪ್ತ ಶತಿ ಪಾರಾಯಣ, ಭಗವದ್ಗೀತೆ ಪಾರಾಯಣ, ಸುಂದರಕಾಂಡ ಹಾಗೂ ಗುರುಕಥಾಮೃತ ಪಾರಾಯಣ ಇರಲಿದೆ. ಸಂಜೆ ಶ್ರೀಗಳವರ ಜೀವನ ಚರಿತ್ರೆ ಉಪನ್ಯಾಸ, ರಾಮಾಯಣ/ ಭಾರತ ವಾಚನವನ್ನೂ ಏರ್ಪಡಿಸಲಾಗಿದೆ.

ಮಾ.1ರಂದು ಶಿವರಾತ್ರಿ ಪ್ರಯುಕ್ತ ರುದ್ರಹೋಮ ಹಮ್ಮಿಕೊಳ್ಳಲಾಗಿದೆ. ಮಾ.5ರಂದು ಶ್ರೀಗಳ ಆರಾಧನೆ  ಹಿನ್ನೆಲೆಯಲ್ಲಿ ಪಲ್ಲಕ್ಕಿ ಉತ್ಸವ ಇರಲಿದೆ ಎಂದು ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸ ಟ್ರಸ್ಟ್‌ನ ಕಾರ್ಯದರ್ಶಿ ತಿಳಿಸಿದ್ದಾರೆ.

ಮಾಹಿತಿಗೆ ಸಂಪರ್ಕಿಸಿ 9686404565, 9731623570

Key words: Lord- Shankaralinga Saraswati -Paramahamsa -26th February