ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ ಲೂಟಿ: ಇದಕ್ಕೆ ರಮೇಶ್ ಕುಮಾರ್ ಮಾತೇ ಸಾಕ್ಷಿ- ಸಚಿವ ಆರ್.ಅಶೋಕ್.

Promotion

ಬೆಂಗಳೂರು,ಜುಲೈ,22,2022(www.justkannada.in):  ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ ಲೂಟಿ ಮಾಡಿದೆ. ಇದಕ್ಕೆ ರಮೇಶ್ ಕುಮಾರ್ ಅವರ ಮಾತೇ ಸಾಕ್ಷಿ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.

ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆ ಕುರಿತು ಮಾತಾನಾಡಿದ ಸಚಿವ ಆರ್.ಅಶೋಕ್, ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸ್ 60 ವರ್ಷದ ನಿಜ ಬಣ್ಣವನ್ನು ಹೊರಹಾಕಿದ್ದಾರೆ. ಯಾವಾಗಲೂ ರಮೇಶ್ ಕುಮಾರ್ ಸತ್ಯ ಹೇಳುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಇಡಿ ವಿಚಾರಣೆಗೆ ರಮೇಶ್ ಕುಮಾರ್ ಸಾಕ್ಷಿ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್  ನಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಈಗ ಅವರ ಪಕ್ಷದವರೇ 3-4 ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಜೋತೆ ಚರ್ಚೆ ಮಾಡುವ ಮೊದಲು ಡಿ ಕೆ ಶಿವಕುಮಾರ್ ಅವರು ರಮೇಶ್ ಕುಮಾರ್ ಜೊತೆ ಕುಳಿತು ಮಾತನಾಡಲಿ. ಮೊದಲು ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರಿಗೆ ಡಿಬೇಟ್ ಗೆ ಮಾಡಿಸಬೇಕು. ಆಮೇಲೆ ಬೇಕಾದರೆ ನಾವು ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದು ಟಾಂಗ್ ನೀಡಿದರು.

Key words: Looting – 60 years -Congress –Minister- R. Ashok.