ಲೋಕಾಯುಕ್ತ ಇದ್ದಿದ್ಧರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು- ಎಂಎಲ್ ಸಿ ಹೆಚ್.ವಿಶ್ವನಾಥ್.

Promotion

ಮೈಸೂರು,ಡಿಸೆಂಬರ್,17,2021(www.justkannada.in):  ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು. ರೀ ಡೂನಲ್ಲಿ ಜೈಲಿಗೆ ಹೋಗುತ್ತಿದ್ದರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟಾಂಗ್ ನೀಡಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ಧರಾಮಯ್ಯ ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲು ಲೋಕಾಯುಕ್ತಗೆ ಬಾಗಿಲ ಹಾಕಲಾಯ್ತು. ಪವರ್‌ಪುಲ್ ಆಗಿದ್ದ ಲೋಕಾಯುಕ್ತವನ್ನು ಬಂದ್ ಮಾಡಿಸಿದ್ದು ಸಿದ್ದರಾಮಯ್ಯ. ಇಲ್ಲವಾದರೆ ಯಡಿಯೂರಪ್ಪ ರೀತಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂದು ಹೇಳಿದರು.

ಅಧಿವೇಶನಕ್ಕೆ ಹೋಗಲು ಆರೋಗ್ಯದ ಕಾರಣ ಸಾಧ್ಯವಾಗಲಿಲ್ಲ. ಎರಡು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸ್ಪೀಕರ್ ಬಳಿ ಅನುಮತಿ ಪಡೆದಿದ್ದೇನೆ. ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅನುಭವಿಗಳು. ಸದನದಲ್ಲಿ ಮಾತನಾಡುವುದನ್ನು ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಸಮಂಜಸವಲ್ಲ. 40% ಕಮಿಷನ್ ಬಗ್ಗೆ ತನಿಖೆಯಾಗಬೇಕು. ಅನ್ನೋದನ್ನು ಸದನದ ಒಳಗೆ ಕೇಳಬೇಕು. ಅದಕ್ಕೆ ಪೂರಕ ಸಾಕ್ಷಿ ದಾಖಲೆಯೊಂದಿಗೆ ಕೇಳಬೇಕು. ನೀವು ಮಾತ್ರ ಸತ್ಯವಂತರು‌ ಬಿಜೆಪಿ ಪರ್ಸೆಂಟೇಜ್ ಅವರು ಅಂತಾರೆ.ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ನಾಯಕರು ಬಗ್ಗೆ ಮಾತನಾಡುತ್ತೇನೆ. ನಿಮ್ಮ ಸರ್ಕಾರ ಇದ್ದಾಗ ಡಿಕೆಶಿ 7 ಸಾವಿರ ಕೋಟಿ ಸೋಲಾರ್ ಟೆಂಡರ್ 3 ನಿಮಿಷದಲ್ಲಿ ಮುಗಿದಿದೆ. ಟೆಂಡರ್ ಭಾಗ್ಯ ಸಿದ್ದರಾಮಯ್ಯ ಕಾಲದಲ್ಲಿ ಆಗಿದ್ದು. ಸತ್ಯವಂತ ಸಿದ್ದರಾಮಯ್ಯ ಲೋಕಾಯುಕ್ತ ಏಕೆ ಸ್ಕ್ಯ್ರಾಪ್ ಮಾಡಿದಿರಿ.? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಲೋಕಾಯುಕ್ತ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಜೈಲಿಗೆ ಹಾಕಿತ್ತು. ಅರ್ಕಾವತಿ ರೀ ಡೂ ಹೊಸ ಹೆಸರು ನೀಡಿದಿರಿ. ಲ್ಯಾಂಡ್ ಡೀ ನೋಟಿಫಿಕೇಶನ್‌ ಗೆ ಹೊಸ ಹೆಸರು. 40% ಜೊತೆಗೆ ರೀ ಡೂ ಸಹ ತನಿಖೆಯಾಗಲಿ.ಆಗ ಯಾರು ಸತ್ಯವಂತರು ಅಂತಾ ಗೊತ್ತಾಗುತ್ತೇ. ಯಾರು ಇದನ್ನು ಮರೆತಿಲ್ಲ ಸಿದ್ದರಾಮಯ್ಯ ಅವರೇ ಎಂದು ಹೆಚ್.ವಿಶ್ವನಾಥ್  ಕುಟುಕಿದರು.

ನಿಮ್ಮ ಕಾಲದ ರೀ ಡೂಗೆ ನೀವು ಸಿದ್ದರಿದ್ದೀರಾ.?  ನಿಜವಾಗಲೂ ಸತ್ಯವಂತರಾಗಿದ್ದರೆ ಒಪ್ಪಿಕೊಳ್ಳಿ..

ಮಾಜಿ ಸಚಿವ ಆಂಜನೇಯ ಅವರ ಬೆಡ್‌ ಶೀಟ್ ಭ್ರಷ್ಟಾಚಾರ ಪ್ರಸ್ತಾಪಿಸಿದ ಹೆಚ್.ವಿಶ್ವನಾಥ್, ನೀವೇ ಸಿಎಂ ಆಗಿದ್ದಾಗಲೇ ಆದ ಭ್ರಷ್ಟಾಚಾರ. ಇದು ಜಗಜ್ಜಾಹಿರವಾಗಿರುವ ವಿಚಾರ. ಸ್ಟೀಲ್ ಬ್ರಿಡ್ಜ್‌ ನಲ್ಲಿ ಎಷ್ಟು ಪರ್ಸೆಂಟೇಜ್, ನೀವು ಮಹಾದೇವಪ್ಪ ಏಕೆ ಮಾತು ಬಿಟ್ಟಿದ್ದೀರಿ.? ಜನರಿಗೆ ಇದರ ಕಾರಣ ನೀಡಿ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಸುಲಭ ಅಲ್ಲ. ನೀವು ಸತ್ಯವಂತರಾಗಿದ್ದರೆ ನಿಮ್ಮ ಮಾತು ಕೇಳಬಹುದಿತ್ತು. ನಿಮ್ಮ ಕಾಲದ ರೀ ಡೂಗೆ ನೀವು ಸಿದ್ದರಿದ್ದೀರಾ.?  ನಿಜವಾಗಲೂ ಸತ್ಯವಂತರಾಗಿದ್ದರೆ ಒಪ್ಪಿಕೊಳ್ಳಿ ಎಂದು ಹೆಚ್.ವಿಶ್ವನಾಥ್ ಗುಡುಗಿದರು.  ಉಗ್ರಪ್ಪ ಸಲೀಂ ಮಾತುಕತೆ ಉಲ್ಲೇಖ ಮಾಡಿದ ಎಚ್ ವಿಶ್ವನಾಥ್, ಡಿ ಕೆ ಶಿವಕುಮಾರ್ ಬಂದ ಮೇಲೆ ಜಾಸ್ತಿ ಆಯ್ತು ಅಂತಾ ಒಪ್ಪಿಕೊಂಡಿದ್ದಾರೆ ಎಂದರು.

ಸದನದಲ್ಲಿ ರಮೇಶ್ ಕುಮಾರ್ ರೇಪ್ ಕುರಿತ ಮಾತಿನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು. ಯಾವ ವಿಚಾರ ಹೇಗೆ ಮಾತಾಡಬೇಕೆಂದು ಅರಿಯಬೇಕಿತ್ತು. ತಾನೇ ಮಹಾನ್ ಬುದ್ಧಿವಂತ ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್. ಎಂತಹ ಮನುಷ್ಯ ಅಂತಾ ರಾಜ್ಯದ ಜನರ ಮುಂದೆ ಸಾಬೀತಾಗಿದೆ. ಅವರ ಎಲ್ಲಾ ಕಥೆಗಳು ಎಲ್ಲರಿಗು ಗೊತ್ತು.? ನಾನು ಆ ಕಥೆ ಹೇಳಿದರೆ, ನನ್ನನ್ನ ಹುಚ್ಚ ಅಂತ ಹೇಳುತ್ತಾರೆ. ಅವರ ಸಭ್ಯಸ್ಥಿಕೆ ನಿನ್ನೆ ಸದನದಲ್ಲಿ ಗೊತ್ತಾಗಿದೆ ಎಂದು ಹರಿಹಾಯ್ದರು.

ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ.

ಮೈಸೂರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋತ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಕೆಲ ಬಿಜೆಪಿ ನಾಯಕರೇ ಅಮಾಯಕ ರಘುರನ್ನ ಬಲಿ ಕೊಟ್ಟರು. ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ. ಮೈಸೂರು ಭಾಗದಲ್ಲಿ ಬಿಜೆಪಿ‌ಯ ಕೆಲ ನಾಯಕರು ಜೆಡಿಎಸ್ ಏಜೆಂಟರ್‌ ಗಳಾಗಿದ್ದಾರೆ. ಜೆಡಿಎಸ್‌ ಏಜೆಂಟ್‌ಗಳಾಗಿ ಬಿಜೆಪಿಗೆ ಒಳ ಏಟು ಹೊಡೆಯುತ್ತಿದ್ದಾರೆ. ಅಂತಹ ನಾಯಕರ ಹೆಸರುಗಳು ಆದಷ್ಟು ಬೇಗ ತೇಲಿ ಬರುತ್ತದೆ. ಇವರ ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಬಲಿಯಾದರು. ಕೆಲವರು ಜೆಡಿಎಸ್ ಪರವಾಗೆ ಕೆಲಸ ಮಾಡಿದರು ಎಂದು ಎಂಎಲ್‌ಸಿ ವಿಶ್ವನಾಥ್  ಹೇಳಿದರು.

Key words: Lokayukta –former CM- Siddaramaiah – jail- MLC –H. VISHWANATH.